ಹುಬ್ಬಳ್ಳಿ :ಅಪರಿಚಿತ ವ್ಯಕ್ತಿಯೊಬ್ಬನಿಗೆ ಮೂಗಿನಿಂದ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹು-ಧಾ ಮಹಾನಗರ ಪಾಲಿಕೆ ಆವರಣದ ಉದ್ಯಾನದಲ್ಲಿ ನಡೆದಿದೆ.
ಮೂರ್ಛೆ ಹೋದ ಅಪರಿಚಿತ : ಸ್ಥಳೀಯರಲ್ಲಿ ಹೆಚ್ಚಿದ ಆತಂಕ - hubli latest news
ಹುಬ್ಬಳ್ಳಿ ಮಹಾನಗರ ಪಾಲಿಕೆ ಆವರಣದಲ್ಲಿ ವ್ಯಕ್ತಿಯ ಮೂಗಿನಿಂದ ರಕ್ತಸ್ರಾವವಾಗಿ ಮೂರ್ಛೆ ಹೋಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಮೂಗಿನಿಂದ ರಕ್ತ ಸ್ರಾವವಾಗಿ ಮೂರ್ಚೆ ಹೋದ ಅಪರಿಚಿತ
ವ್ಯಕ್ತಿಯ ಮೂಗಿನಿಂದ ರಕ್ತಸ್ರಾವವಾಗುತ್ತಿರುವುದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಲಾಕ್ಡೌನ್ ಸಂದರ್ಭದಲ್ಲಿ ಎಲ್ಲೆಡೆ ಉದ್ಯಾನ ಹಾಗೂ ಪಾರ್ಕ್ಗಳಿಗೆ ಸರ್ಕಾರ ನಿರ್ಬಂಧ ಹಾಕಿತ್ತು. ಇದೀಗ ಸಡಿಲಿಕೆ ಮಾಡಿರುವುದರಿಂದ, ಜನರು ಪಾರ್ಕ್ಗಳಲ್ಲಿ ವಿಶ್ರಾಂತಿಗೆ ಬರುತ್ತಿದ್ದಾರೆ.
ಈಗಾಗಲೇ ಜನರಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಹಾಗಾಗಿ ಕೂಡಲೇ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated : May 26, 2020, 9:08 PM IST