ಧಾರವಾಡ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡ ಹಿನ್ನೆಲೆ ಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಚೇರಿ ನಾಮಫಲಕವನ್ನು ಕಚೇರಿ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಮುಗಿಯಿತು ನಿಮ್ಮ ಅಧಿಕಾರ : ದೇಶಪಾಂಡೆ ಹೆಸರಿನ ನಾಮಫಲಕ ಮುಚ್ಚಿದ ಸಿಬ್ಬಂದಿ - ಧಾರವಾಡ
ಧಾರವಾಡದ ವಾರ್ತಾ ಇಲಾಖೆ ಪಕ್ಕದಲ್ಲಿರುವ ಕಚೇರಿ ಆವರಣದಲ್ಲಿರುವ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ನಾಮಫಲಕದ ಬೋರ್ಡ್ ಗೆ ಅಧಿಕಾರಿಗಳು ಪೇಪರ್ ಅಂಟಿಸಿದ್ದಾರೆ.
ದೇಶಪಾಂಡೆ ಹೆಸರಿನ ನಾಮಫಲಕವನ್ನು ಮುಚ್ಚಿದ ಸಿಬ್ಬಂದಿ
ವಾರ್ತಾ ಇಲಾಖೆ ಪಕ್ಕದಲ್ಲಿರುವ ಕಚೇರಿ ಆವರಣದಲ್ಲಿರುವ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ನಾಮಫಲಕದ ಬೋರ್ಡ್ ಗೆ ಅಧಿಕಾರಿಗಳು ಪೇಪರ್ ಅಂಟಿಸಿದ್ದಾರೆ.
ನಿನ್ನೆ ನಡೆದ ವಿಶ್ವಾಸ ಮತ ಸಾಬೀತಿನಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಇದೀಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಕಳೆದ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ದೇಶಪಾಂಡೆ ಅವರ ಕಚೇರಿಯಲ್ಲಿ ನಾಮಫಲಕ ಅಳಿಸಲಾಗಿದೆ.