ಹುಬ್ಬಳ್ಳಿ :ಸೌರಶಕ್ತಿ ಮೂಲಕ ರೈಲು ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆ ಮಾಡಿ ನೂರಕ್ಕೂ ಹೆಚ್ಚು ಕೋಟಿ ಉಳಿತಾಯ ಮಾಡಿದ್ದ ನೈಋತ್ಯ ರೈಲ್ವೆ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನ ರೈಲು ಚಾಲನೆಗೆ ಕಲ್ಲಿದ್ದಲು, ಡೀಸೆಲ್ ಆಶ್ರಯಿಸಿದ್ದ ಭಾರತೀಯ ರೈಲ್ವೆ ಈಗ ವಿದ್ಯುತ್‌ಗೆ ಮೊರೆ ಹೋಗಿದೆ. ಈ ವಿದ್ಯುತ್ ರೈಲು ಚಾಲನೆ ಮೂಲಕ ಇಂಧನ ಉಳಿತಾಯದ ಜತೆಗೆ ಪರಿಸರ ರಕ್ಷಣೆಯ ಹೊಣೆ ಹೊತ್ತಿದೆ.
2,056 ಲೀಟರ್ ಡೀಸೆಲ್ ಉಳಿತಾಯ : ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ-ಗುಂಟಕಲ್-ಹುಬ್ಬಳ್ಳಿ ಪ್ಯಾಸೆಂಜರ್ ರೈಲನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ಮೂಲಕ ಸಂಚರಿಸುವಂತೆ ಮಾಡಿದೆ. ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಡೀಸೆಲ್ ಲೋಕೋಮೋಟಿವ್‌ನಿಂದ ಸಂಚರಿಸುತ್ತಿತ್ತು.
ಈ ರೈಲು ಎಲೆಕ್ಟ್ರಿಕಲ್ ಎಂಜಿನ್ನೊಂದಿಗೆ ಸಂಚರಿಸುವುದರಿಂದ ಪ್ರತಿದಿನ ಸುಮಾರು 2,056 ಲೀಟರ್ಗಳಷ್ಟು ಡೀಸೆಲ್ ಉಳಿತಾಯವಾಗುತ್ತೆ. ಅಲ್ಲದೇ ಪ್ರತಿ ತಿಂಗಳು ಸುಮಾರು 61,000 ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ನೈಋತ್ಯ ರೈಲ್ವೆಯಲ್ಲಿ 2019-20 ಹಾಗೂ 2020-21ರಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ನೊಂದಿಗೆ ಸಂಚರಿಸುವಂತೆ ವಿಸ್ತರಿಸಲಾಗಿದೆ.