ಧಾರವಾಡ: ಶ್ರೀಗಂಧದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾ.ಈಶಪ್ಪ.ಕೆ.ಭೂತೆ ಆದೇಶ ನೀಡಿದ್ದಾರೆ.
ಶ್ರೀಗಂಧ ಮರ ಕಳ್ಳತನ: 6 ಆರೋಪಿಗಳಿಗೆ 5 ವರ್ಷ ಜೈಲು, ತಲಾ ಒಂದು ಲಕ್ಷ ರೂ. ದಂಡ - ಗುಂಗರಗಟ್ಟಿ ಅರಣ್ಯ ವಲಯ
ಶ್ರೀಗಂಧದ ಮರಗಳನ್ನು ಕಳ್ಳಸಾಗಾಣಿಕೆ ಮಾಡಿದ್ದ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಶ್ರೀಗಂಧ ಮರ ಕಳ್ಳತನ
ಕಳೆದ 2 ವರ್ಷದ ಹಿಂದೆ ಗುಂಗರಗಟ್ಟಿ ಅರಣ್ಯ ವಲಯ ವ್ಯಾಪ್ತಿಯ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನ ಶ್ರೀಗಂಧದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದರು. ಸರ್ಕಾರದ ಪರ ಅಭಿಯೋಜಕ ಜೆ.ಎಲ್.ಪವಾರ ವಕಾಲತ್ತು ವಹಿಸಿದ್ದರು.