ಹುಬ್ಬಳ್ಳಿಯಲ್ಲಿ ಮಳೆಯ ಆರ್ಭಟ: ಹಾರಿ ಹೋಯ್ತು ರೈಲ್ವೆ ಕಟ್ಟಡದ ಮೇಲ್ಛಾವಣಿ - hubli railway station news
ಹುಬ್ಬಳ್ಳಿಯಲ್ಲಿ ಶನಿವಾರ ಸಂಜೆ ಸಮಯದಲ್ಲಿ ಸುರಿದ ಭಾರಿ ಮಳೆಯಿಂದ ರೈಲ್ವೆ ನಿಲ್ದಾಣದಲ್ಲಿ ಕಟ್ಟಡವೊಂದರ ಮೇಲ್ಛಾವಣಿ ಹಾರಿ ಹೋಗಿದೆ.
ಹಾರಿ ಹೋದ ಮೇಲ್ಚಾವಣಿ
ಹುಬ್ಬಳ್ಳಿ:ನಗರದಲ್ಲಿ ಸುರಿದ ಭಾರಿ ಮಳೆಯಿಂದ ನೈಋತ್ಯ ರೈಲ್ವೆ ವಲಯದ ನಿಲ್ದಾಣದಲ್ಲಿ ಕಟ್ಟಡವೊಂದರ ಮೇಲ್ಛಾವಣಿ ಹಾರಿ ಹೋಗಿದ್ದು, ಕಟ್ಟಡದಲ್ಲಿ ಮಳೆ ನೀರು ತುಂಬಿಕೊಂಡಿತ್ತು.
ಶನಿವಾರ ಸಂಜೆ ಸಮಯದಲ್ಲಿ ಸುರಿದ ಭಾರಿ ಮಳೆಯಿಂದ ರೈಲ್ವೆ ನಿಲ್ದಾಣದ ಹಳೆಯ ಕಟ್ಟಡಕ್ಕೆ ಇದರಿಂದ ಹಾನಿಯಾಗಿದೆ. ಎರಡು ಮತ್ತು ಮೂರನೇ ಪ್ಲಾಟ್ ಫಾರ್ಮ್ನಲ್ಲಿರುವ ಕಟ್ಟಡ ಇದಾಗಿದ್ದು, ಮೊದಲೇ ಶಿಥಿಲಗೊಂಡಿದ್ದರಿಂದ ಮಳೆಯಿಂದ ಮೇಲ್ಛಾವಣಿಯಲ್ಲಿರುವ ಶೀಟುಗಳು ಹಾರಿ ಹೋಗಿವೆ.