ಹುಬ್ಬಳ್ಳಿ: ನಿನ್ನೆ ತಡರಾತ್ರಿ ಅಣ್ಣಿಗೇರಿ ಪಟ್ಟಣದ ಪುರಸಭೆ ಬಳಿಯ ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸುವೊಂದನ್ನು ಸಾರ್ವಜನಿಕರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಚರಂಡಿಗೆ ಬಿದ್ದು ಒದ್ದಾಡುತ್ತಿದ್ದ ಹಸು ರಕ್ಷಿಸಿ ಮಾನವೀಯತೆ ಮೆರೆದ ಜನ - ಹುಬ್ಬಳ್ಳಿ ಹಸು ರಕ್ಷಣೆ ನ್ಯೂಸ್
ಚರಂಡಿಗೆ ಬಿದ್ದು ಒದ್ದಾಡುತ್ತಿದ್ದ ಹಸುವೊಂದನ್ನು ಸಾರ್ವಜನಿಕರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

Cow
ಚರಂಡಿಗೆ ಬಿದ್ದ ಹಸು ಮೇಲಕ್ಕೆ ಬರಲಾಗದೆ ನಿತ್ರಾಣಗೊಂಡಿತ್ತು. ಬೆಳಗಿನ ಜಾವ ರೈತರು, ಕೆಲ ಸ್ಥಳೀಯ ಯುವಕರು ಹಸುವನ್ನು ಕಂಡು ಮೇಲಕ್ಕೆ ಎತ್ತಲು ಹರಸಾಹಸ ಪಟ್ಟರು.
ಎಷ್ಟೇ ಪ್ರಯತ್ನಿಸಿದರೂ ಕೂಡ ಪ್ರಯೋಜನವಾಗಲಿಲ್ಲ. ಕೊನೆಗೆ ಕ್ರೇನ್ ಬಳಸಿ ಹಸುವನ್ನು ಮೇಲಕ್ಕೆತ್ತಲಾಯಿತು.