ಹುಬ್ಬಳ್ಳಿ:ನಾನೇನೂ ಸನ್ಯಾಸಿಯಲ್ಲ. ಎಲ್ಲವನ್ನೂ ಕಾಲ ನಿರ್ಧರಿಸಲಿದೆ. ಈ ನಾಲ್ಕು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಲ್ಲಿದ್ದಾರೆ. ಮುಂದೆ ನೋಡೋಣ ಎಂದು ಸಚಿವ ಡಿ ಕೆ ಶಿವಕುಮಾರ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಹದಿನೈದು ಇಪ್ಪತು ವರ್ಷಗಳಿಂದ ಮುಖ್ಯಮಂತ್ರಿ ಆಗುತ್ತೇನೆ ಎಂದು ಭವಿಷ್ಯ ಹೇಳುತ್ತಾರೆ. ಆದರೆ, ಇದೀಗ ಏನೂ ಅರ್ಜಂಟ್ ಇಲ್ಲ. ಇದೆಲ್ಲ ಆದಾಗ ತಾನೇ ? ಎಂದರು. ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ತರೋಣ. ಆಮೇಲೆ ಪಕ್ಷದ ವರಿಷ್ಠರು ಎಲ್ಲಾ ತೀರ್ಮಾನ ತಗೆದುಕೊಳ್ಳುತ್ತಾರೆ. ಆದರೆ, ನಾನೇನೂ ಸನ್ಯಾಸಿಯಲ್ಲ. ನಾನೂ ಕಾರ್ಯಕರ್ತರನಾಗಿ ಕೆಲಸ ಮಾಡುತ್ತೇನೆ ಎಂದರು.
ಹುಟ್ಟುಹಬ್ಬ ಆಚರಿಸದಂತೆ ಸಚಿವ ಡಿ.ಕೆ.ಶಿ ಮನವಿ
ರಾಜ್ಯದಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ಯಾರೂ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಬಾರದು ಎಂದು ಸಚಿವ ಡಿ ಕೆ ಶಿವಕುಮಾರ್ ಅವರು ತಮ್ಮ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ತಾವು ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮಗ್ನರಾಗಿದ್ದು, ಹುಟ್ಟುಹಬ್ಬ ಆಚರಣೆ ನಿಮಿತ್ತ ಯಾರೂ ಹುಬ್ಬಳ್ಳಿಗೆ ಬರುವುದು ಬೇಡ.
ಕಟೌಟ್ ಹಾಕುವುದಾಗಲಿ, ಕೇಕ್ ಕತ್ತರಿಸುವುದಾಗಲಿ ಮಾಡೋದು ಬೇಡ ಎಂದರು. ಮೇ 15 ಬುಧವಾರದಂದು ಶಿವಕುಮಾರ್ ಅವರ 58ನೇ ಜನ್ಮದಿನವಾಗಿದ್ದು, ಅಂದು ಬೆಳಗ್ಗೆ ಲಕ್ಷ್ಮೇಶ್ವರ ಸಮೀಪದ ಮುಕ್ತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ ಚುನಾವಣೆ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಇದೇ ಸಂದರ್ಭದಲ್ಲಿ ಮನೆ ಕುಸಿತಗೊಂಡು ಮೂವರು ಮೃತಪಟ್ಟ ಕುಟುಂಬಕ್ಕೆ ಡಿ ಕೆ ಶಿವಕುಮಾರ ಸಾಂತ್ವನ ಹೇಳಿದರು.