ಕರ್ನಾಟಕ

karnataka

ETV Bharat / state

ಮಠದ ಆಸ್ತಿ ಸ್ವಯಿಚ್ಛೆಯಿಂದ ಮರಳಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

ದಾನವಾಗಿ ಪಡೆದ ಮಠದ ಆಸ್ತಿಯನ್ನು ಕೂಡಲೇ ಸ್ವಯಿಚ್ಛೆಯಿಂದ ಮರಳಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

Dingaleshwar Swamiji of the Balehosur matt
ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ

By

Published : Jan 12, 2021, 8:57 PM IST

ಧಾರವಾಡ:ಕೆಲವು ಒಪ್ಪಂದಗಳೊಂದಿಗೆಹುಬ್ಬಳ್ಳಿ ಮೂರುಸಾವಿರ ಮಠದ ಆಸ್ತಿಯನ್ನು ಕೆಲವರಿಗೆ ದಾನವಾಗಿ ಕೊಡಲಾಗಿದೆ. ಈ ಎಲ್ಲಾ ಆಸ್ತಿ ಮಠಕ್ಕೆ ಉಳಿಯಬೇಕು. ಅದಕ್ಕೆ ನಾವು ಎಲ್ಲೆಡೆ ಜನಜಾಗೃತಿ ಮಾಡುತಿದ್ದೇವೆ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ...ಸಾಲ-ಕೆಲಸ ಕೊಡಿಸುವುದಾಗಿ ನೂರಕ್ಕೂ ಹೆಚ್ಚು ಜನರಿಗೆ ಪಂಗನಾಮ!

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೋರಾಟ ತೀವ್ರಗೊಳ್ಳುವುದಕ್ಕೂ ಮೊದಲೇ ಮಠದ ಭೂಮಿ ಖರೀದಿಸುತ್ತಿರುವವರೇ ಸ್ವಯಿಚ್ಛೆಯಿಂದ ಮರಳಿಸಬೇಕಿದೆ. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಎಚ್ಚರಿಸಿದರು.

ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ

ಮಠಗಳಲ್ಲಿ ಭಕ್ತರು ಹೊರ ಹೋಗಿ, ರಾಜಕಾರಣಿಗಳು ಒಳ ಹೋದರೆ ಅಲ್ಲಿ ಅಶಾಂತಿ ಖಚಿತ. ಮಠದಲ್ಲಿ ಸ್ವಾಮಿಗಳು ಇರಬೇಕು. ವಿಧಾನಸೌಧದಲ್ಲಿ ರಾಜಕಾರಣಿಗಳು ಇರಬೇಕು. ಬಹಳಷ್ಟು ಮಠಗಳಲ್ಲಿ ರಾಜಕಾರಣಿಗಳ ಪ್ರವೇಶದಿಂದ ಮಠದ ಆಸ್ತಿ ನಾಶವಾಗುತ್ತಿದೆ. ಅದು ಒಳ್ಳೆಯದಲ್ಲ ಎಂದರು.

ABOUT THE AUTHOR

...view details