ಕರ್ನಾಟಕ

karnataka

ETV Bharat / state

ಪೈಪ್​​ಲೈನ್​​ ಒಡೆದು ನೀರು ಪೋಲು.. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆರೋಪ .. - Dharwad break water pipeline

ಕುಡಿಯುವ ನೀರಿನ ಪೈಪ್ ಒಡೆದು ಹೋದರೂ ಜಲ ಮಂಡಳಿ ಅಧಿಕಾರಿಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲ. ಹಲವು ದಿನಗಳಿಂದ ಕಾಮಗಾರಿ ನಡೆಸಿದ್ದರೂ ಅಲ್ಲಲ್ಲಿ ನೀರು ಪೋಲಾಗುತ್ತಿದೆ ಎಂದು‌ ಸ್ಥಳೀಯರು ಆರೋಪಿಸಿದ್ದಾರೆ.

pipeline was broken
ಪೈಪ್​​ಲೈನ್​​ ಒಡೆದು ನೀರು ಪೋಲು

By

Published : Apr 29, 2020, 1:11 PM IST

ಧಾರವಾಡ :ಜಲ ಮಂಡಳಿಯ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ನೀರಿನ ಪೈಪ್​​ಲೈನ್​​ ಒಡೆದು ನೀರು ಪೋಲಾಗುತ್ತಿದೆ. ಕಳೆದ ಹಲವು ದಿನಗಳಿಂದ ದುರಸ್ತಿ ನಡೆದರೂ‌ ನೀರಿನ ಸೋರಿಕೆ ಕಡಿಮೆಯಾಗಿಲ್ಲ.

ನೀರು ಪೋಲಾಗುತ್ತಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು..

ನಗರದ ಯಾಲಕ್ಕಿ ಶೆಟ್ಟರ್ ಕಾಲೋನಿಯಲ್ಲಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಕುಡಿಯುವ ನೀರಿನ ಪೈಪ್ ಒಡೆದು ಹೋದರೂ ಜಲ ಮಂಡಳಿ ಅಧಿಕಾರಿಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲ. ಹಲವು ದಿನಗಳಿಂದ ಕಾಮಗಾರಿ ನಡೆಸಿದ್ದರೂ ಅಲ್ಲಲ್ಲಿ ನೀರು ಪೋಲಾಗುತ್ತಿದೆ ಎಂದು‌ ಸ್ಥಳೀಯರು ಆರೋಪಿಸಿದ್ದಾರೆ.

ಇಂದು ನಸುಕಿನ ಜಾವ 3 ರಿಂದ ಮತ್ತೊಂದು ಕಡೆ ಪೈಪ್‌ಲೈನ್ ಒಡೆದಿದೆ. ಸುದ್ದಿ ತಿಳಿದರೂ ಜಲ ಮಂಡಳಿ‌ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details