ಧಾರವಾಡ: ಮಾಸ್ಕ್ ಧರಿಸದೆ ಸಭೆಗೆ ಆಗಮಿಸಿದ್ದ ಮಹಿಳಾ ಅಧಿಕಾರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾಟೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಗೂ ಮೊದಲೇ ಎಲ್ಲಾ ಅಧಿಕಾರಿಗಳು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದ್ದರು.
ಮಾಸ್ಕ್ ಧರಿಸದ ಮಹಿಳಾ ಅಧಿಕಾರಿಗೆ ತರಾಟೆ ತೆಗೆದುಕೊಂಡ ಕೇಂದ್ರ ಸಚಿವ - ಧಾರವಾಡ ಜಿಲ್ಲಾ ಸುದ್ದಿ
ಮಾಸ್ಕ್ ಹಾಕಿಕೊಳ್ಳದೆ ಸಭೆಗೆ ಬಂದಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿಗೆ ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾಟೆ ತೆಗೆದುಕೊಂಡರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಮಹಿಳಾ ಅಧಿಕಾರಿಗೆ ತರಾಟೆ ತೆಗೆದುಕೊಂಡ ಕೇಂದ್ರ ಸಚಿವ
ಮಾಸ್ಕ್ ಇಲ್ಲದೇ ಕುಳಿತಿದ್ದೀರಿ, ಹೊರಗೆ ಹೋಗಿ ಬಿಡಿ. ಮಾಸ್ಕ್ ಇಲ್ಲವಾದಲ್ಲಿ ಹೊರಗೆ ಹೋಗಿ ಎಂದು ವಿಶೇಷ ಭೂ ಸ್ವಾಧೀನಾಧಿಕಾರಿ ಶಾರದಾ ಕೋಲ್ಕಾರ ಅವರಿಗೆ ಕೇಂದ್ರ ಸಚಿವ ಜೋಶಿ ಕ್ಲಾಸ್ ತೆಗೆದುಕೊಂಡರು. ಸಚಿವರು ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಶಾರದಾ ಅವರು ಮಾಸ್ಕ್ ಹಾಕಿಕೊಂಡು ಸಭೆಯಲ್ಲಿ ಕುಳಿತರು.