ಕರ್ನಾಟಕ

karnataka

By

Published : Jun 9, 2021, 3:52 PM IST

ETV Bharat / state

ವಾಯುವ್ಯ ಕರ್ನಾಟಕ ಸಾರಿಗೆ ಸಿಬ್ಬಂದಿಗಿಲ್ಲ ಸಂಬಳ: ಸಾರಿಗೆ ಮುಷ್ಕರಕ್ಕೆ ಸಾಥ್ ನೀಡಿದವರಿಗೆ ಶಾಕ್ ಕೊಟ್ಟ ಸಂಸ್ಥೆ

ವಾಯುವ್ಯ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ 45 ಕೋಟಿ ವೇತನ ಪಾವತಿಯಾಗಬೇಕಿತ್ತು. ಆದರೆ, ಸರ್ಕಾರ ಕೇವಲ 19 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಮೇ ತಿಂಗಳ ಸಂಬಳ ಇದುವರೆಗೂ ಪಾವತಿಯಾಗಿಲ್ಲ. ಸರ್ಕಾರದಿಂದ 49 ಕೋಟಿ ಹಣ ವಾಯುವ್ಯ ಸಾರಿಗೆ ಸಂಸ್ಥೆಗೆ ಬಿಡುಗಡೆಯಾಗಿದೆ. ಆದರೆ, ಸಿಬ್ಬಂದಿಗೆ ಮಾತ್ರ ಮೇ ತಿಂಗಳ ವೇತನ ಬಿಡಿಗಾಸು ಬಂದಿಲ್ಲ.

northwest-transportation-agency
ವಾಯುವ್ಯ ಕರ್ನಾಟಕ ಸಾರಿಗೆ

ಹುಬ್ಬಳ್ಳಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಮಾಡಿದ್ದ ಸಾರಿಗೆ ನೌಕರರಿಗೆ ವಾಯುವ್ಯ ಸಾರಿಗೆ ಸಂಸ್ಥೆ ಬಿಗ್ ಶಾಕ್ ನೀಡಿದೆ. ಅಂದು ಅಧಿಕಾರಿಗಳು ಗೋಗೆರೆದರೂ ಕೆಲಸಕ್ಕೆ ಸಿಬ್ಬಂದಿ ಬಂದಿಲ್ಲ ಅಂತಾ ಇಂದು ಸರ್ಕಾರ ವೇತನ‌ ನೀಡಿದರೂ, ಈ ಸಂಸ್ಥೆ ಮಾತ್ರ ಸಿಬ್ಬಂದಿಗೆ ಸಂಬಳ ನೀಡದೇ ಸತಾಯಿಸುತ್ತಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಸಾರಿಗೆ ನೌಕರರು ಆರನೇ ವೇತನ ಜಾರಿಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಅನಿರ್ಧಿಷ್ಟಾವದಿ ಮುಷ್ಕರ ನಡೆಸಿದ್ದ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದರು. ಕೆಲಸಕ್ಕೆ ಹಾಜರಾಗುವಂತೆ ಸಿಬ್ಬಂದಿಯನ್ನು ಪರಿಪರಿಯಾಗಿ ಬೇಡಿಕೊಂಡರೂ ಸಿಬ್ಬಂದಿ ಮಾತ್ರ ಕೆಲಸಕ್ಕೆ ಬಂದಿರಲಿಲ್ಲ. ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಡ್ಯೂಟಿಗೆ ಬಾರದೆ ಡೋಂಟ್ ಕೇರ್ ಎಂದಿದ್ದರು.

ವಾಯುವ್ಯ ಕರ್ನಾಟಕ ಸಂಸ್ಥೆ ಎಂಡಿ ಕೃಷ್ಣ ಭಾಜಪೇಯಿ ಮಾತನಾಡಿದರು


ವಾಯುವ್ಯ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ 45 ಕೋಟಿ ವೇತನ ಪಾವತಿಯಾಗಬೇಕಿತ್ತು. ಆದರೆ, ಸರ್ಕಾರ ಕೇವಲ 19 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಮೇ ತಿಂಗಳ ಸಂಬಳ ಇದುವರೆಗೂ ಪಾವತಿಯಾಗಿಲ್ಲ. ಸರ್ಕಾರದಿಂದ 49 ಕೋಟಿ ಹಣ ವಾಯುವ್ಯ ಸಾರಿಗೆ ಸಂಸ್ಥೆಗೆ ಬಿಡುಗಡೆಯಾಗಿದೆ. ಆದರೆ, ಸಿಬ್ಬಂದಿಗೆ ಮಾತ್ರ ಮೇ ತಿಂಗಳ ವೇತನ ಬಿಡಿಗಾಸು ಬಂದಿಲ್ಲ. ಮುಷ್ಕರದಲ್ಲಿ ಪಾಲ್ಗೊಂಡು ಅಧಿಕಾರಿಗಳ ಆದೇಶ ಪಾಲನೆ ಮಾಡದಿದ್ದಕ್ಕೆ ಈಗ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಆದರೆ, ವಾಯುವ್ಯ ಸಾರಿಗೆ ಎಂಡಿ ಮಾತ್ರ ಎಲ್ಲರಿಗೂ ವೇತನ ಪಾವತಿ ಮಾಡ್ತೀವಿ ಎನ್ನುತ್ತಿದ್ದಾರೆ. ಸಿಬ್ಬಂದಿ ವರ್ತನೆಯಿಂದ ಬೇಸತ್ತಿದ್ದ ಅಧಿಕಾರಿಗಳು ಈಗ ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ನೌಕರರಿಗೆ ವೇತನ ನೀಡದೇ ಶಾಕ್ ನೀಡಿದ್ದಾರೆ. ಏಪ್ರಿಲ್‌ ತಿಂಗಳ ವೇತನ ಪಾವತಿ ಮಾಡಿದ್ದರೂ ಪೂರ್ಣ ಪ್ರಮಾಣದ ಸಂಬಳ ನೀಡಿಲ್ಲ. ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗೆ 200, 300 ರೂಪಾಯಿ ವೇತನ ಪಾವತಿ ಮಾಡಲಾಗಿದೆ. ಸರ್ಕಾರ ಶೇಕಡಾ 63 ರಷ್ಟು ವೇತನ ನೀಡುವಂತೆ ಹಣ ಬಿಡುಗಡೆ ಮಾಡಿದೆ. ಆದರೆ, ವಾಯುವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾತ್ರ ಸಿಬ್ಬಂದಿ ಮೇಲೆ ರಿವೆಂಜ್ ತೀರಿಸಿಕೊಂಡಿದ್ದು, ನೂರು, ಇನ್ನೂರು ರೂಪಾಯಿ ಸಂಬಳ ಹಾಕಿ ಶಾಕ್ ನೀಡಿದ್ದಾರೆ.

ಓದಿ:ಡಿ.ಕೆ.ರವಿ ಕುರಿತು ಸಿನಿಮಾ ಮಾಡುವುದಾಗಿ ಪರೋಕ್ಷ ಹೇಳಿಕೆ ನೀಡಿದ ಶಾಸಕ ಸಾ.ರಾ.ಮಹೇಶ್

ABOUT THE AUTHOR

...view details