ಹುಬ್ಬಳ್ಳಿ:ಓಂ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಮೃಗ ಕಿರುಚಿತ್ರವನ್ನು ನ.17 ರಂದು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗುವುದುದೆಂದು ನಿರ್ದೇಶಕ ಅಭಿಷೇಕ ದೇಸಾಯಿ ತಿಳಿಸಿದರು.
ಮುಂದಿನ ವಾರ ಯೂಟ್ಯೂಬ್ನಲ್ಲಿ ಬರಲಿದೆ ಮೃಗ - ಲೆಟೆಸ್ಟ್ ಮೃಗ ಶಾರ್ಟ್ ಮೂವಿ ನ್ಯೂಸ್
ಓಂ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಮೃಗ ಕಿರುಚಿತ್ರವನ್ನು ನ.17 ರಂದು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗುವುದುದೆಂದು ನಿರ್ದೇಶಕ ಅಭಿಷೇಕ ದೇಸಾಯಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಭಿಷೇಕ ದೇಸಾಯಿ, ಈ ಚಿತ್ರವನ್ನು ರಾಮದುರ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರು ಕಿರುಚಿತ್ರ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಿದ್ದಾರೆಂದರು.
ಇನ್ನು ಕಿರುಚಿತ್ರದಲ್ಲಿ ಸುಕನ್ಯಾ, ರೋಬೋ ಸಾಗರ, ಹೇಮಂತ ಕುಮಾರ, ವಿಜಯನಾಯ್ಕ, ಶರದ ಮೊಕಾಶಿ ನಟನೆ ಮಾಡಿದ್ದು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶಾಂತ ಸ್ವಭಾವ ಇದ್ದೇ ಇರುತ್ತದೆ. ಅದು ಕೆಲವೊಂದು ಸಂದರ್ಭದಲ್ಲಿ ಮೃಗ ಸ್ವಭಾಗಕ್ಕೆ ತಿರುಗುವುದು. ಹಾಗಾದಾಗ ಏನಾಗುವುದು ಎಂಬುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಈ ವೇಳೆ ಚೈತ್ರಾ ಹಿರೇಮಠ, ರೋಬೋ ಸಾಗರ ಉಪಸ್ಥಿತರಿದ್ದರು.