ಧಾರವಾಡ:ಕಳೆದ ಹದಿನೈದು ದಿನಗಳಿಂದ ಧಾರವಾಡದ ಮುರುಘಾ ಮಠದ ಸಮೀಪವಿರುವ ಡಿಪೋ ಸರ್ಕಲ್ನಲ್ಲಿ ಮಂಗವೊಂದರ ಹಾವಳಿ ಹೆಚ್ಚಾಗಿದ್ದು, ಸುತ್ತಮುತ್ತಲಿನ ನಾಲ್ಕೈದು ಪ್ರದೇಶಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ.
ಧಾರವಾಡ: ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ಮಂಗನ ದಾಳಿ, ಕೈಗೆ ಸಿಕ್ಕರೂ ಪರಾರಿ - ಧಾರವಾಡದ ಮುರುಘಾ ಮಠದ ಸಮೀಪ ಮಂಗನ ಹಾವಳಿ
ಧಾರವಾಡದ ಡಿಪೋ ಸರ್ಕಲ್ನಲ್ಲಿ ಮಂಗನ ಹಾವಳಿ ಹೆಚ್ಚಾಗಿದ್ದು, ಸುತ್ತಮುತ್ತಲಿನ ನಾಲ್ಕೈದು ಪ್ರದೇಶಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ.
ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಮಂಗ
ಮಂಗವು ಜನರ ನಿದ್ದೆಗೆಡಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮಂಗಕ್ಕೆ ಹುಚ್ಚು ಹಿಡಿದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಸ್ಥಳೀಯರ ಮಾಹಿತಿಯಿಂದ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೂ ಸಹ ಮಂಗ ಚಳ್ಳೇ ಹಣ್ಣು ತಿನ್ನಿಸಿದೆ.
ಮಂಗನಿಗೆ ಬಲೆ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರೂ ಬಲೆಯನ್ನು ಬಾಯಿಂದ ಹರಿದುಕೊಂಡು ಮತ್ತೆ ಪರಾರಿಯಾಗಿದೆ. ಇದರಿಂದ ಸ್ಥಳೀಯರು ಮತ್ತಷ್ಟು ಭಯ ಪಡುವಂತಾಗಿದೆ. ಓಣಿಯಲ್ಲಿ ಸುತ್ತಾಡುವ ಜನರಿಗೆ ಮಂಗ ತಲೆನೋವಾಗಿದೆ.