ಹುಬ್ಬಳ್ಳಿ:ವಾಣಿಜ್ಯ ನಗರಿಯಲ್ಲಿ ಇಂದಿನಿಂದ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೆ ಜಿಲ್ಲಾಡಳಿತದ ಈ ಆದೇಶ ಕೆಲ ವ್ಯಾಪಾರಿಗಳನ್ನು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ.
ಲಾಕ್ಡೌನ್ 'ಸಡಿಲಿಕೆ'ಯಿಂದಲೂ ಬರಬಹುದೇ ಸಂಕಷ್ಟ?...ಜಿಲ್ಲಾಡಳಿತದ ಆದೇಶಕ್ಕೆ ಕಂಗಾಲಾದ ವರ್ತಕರು - Lockdown relaxation at hubballi
ನಗರದ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಸ್ಥಳವಾದ ದುರ್ಗದ ಬೈಲ್ ಯಾವ ವಲಯಕ್ಕೆ ಬರಲಿದೆ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಮಾಲೀಕರು ಅಂಗಡಿ ಬಾಗಿಲು ತೆರೆಯಲು ಹಿಂದು ಮುಂದು ನೋಡುವಂತಾಗಿದೆ.
ಜಿಲ್ಲಾಡಳಿತ ಆದೇಶದಂತೆ ಸೀಲ್ಡೌನ್ ವಲಯದ ನೂರು ಮೀಟರ್ ಹಾಗೂ ಕಂಟೇನ್ಮೆಂಟ್ ವಲಯದ ಒಂದು ಕಿಲೋ ಮೀಟರ್ವರೆಗೆ ನಿಷೇಧ ಹೇರಲಾಗಿದ್ದು, ಇದೀಗ ವರ್ತಕರಲ್ಲಿ ಗೊಂದಲ ಸೃಷ್ಟಿಸಿದೆ. ನಗರದ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಸ್ಥಳವಾದ ದುರ್ಗದ ಬೈಲ್ ಯಾವ ವಲಯಕ್ಕೆ ಬರಲಿದೆ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಮಾಲೀಕರು ಅಂಗಡಿ ಬಾಗಿಲು ತೆರೆಯಲು ಹಿಂದು ಮುಂದು ನೋಡುವಂತಾಗಿದೆ.
ಇಂದು ಬೆಳಗ್ಗೆಯೇ ತಮ್ಮ ತಮ್ಮ ಅಂಗಡಿ ಬಾಗಿಲು ತೆರೆಯಲು ಬಂದ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಸರಿಯಾದ ಮಾಹಿತಿ ಇಲ್ಲದೇ ಹಾಗೂ ಜಿಲ್ಲಾಡಳಿತದ ಅಸ್ಪಷ್ಟವಾದ ಆದೇಶದಿಂದ ಅಂಗಡಿಕಾರರು ಬೇಸತ್ತು, ಸ್ಪಷ್ಟವಾದ ಆದೇಶ ನೀಡುವಂತೆ ಒತ್ತಾಯಿಸಿದ್ದಾರೆ.