ಹುಬ್ಬಳ್ಳಿ:ಚರಂಡಿ ನೀರು ಹೋಗಲು ಇದ್ದ ಬ್ರಿಡ್ಜ್ನ ಮೇಲೆ ಕಸ ತುಂಬಿದ ಪರಿಣಾಮ ಸ್ಥಳೀಯರ ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೆ ಕಸ ತೆರವು ಮಾಡುವುದನ್ನು ಬಿಟ್ಟು ಬ್ರಿಡ್ಜ್ಅನ್ನೇ ತೆರವು ಮಾಡಿ ಸಾರ್ವಜನಿಕರಿಗೆ ಸಂಚಾರಕ್ಕೆ ಮಾರ್ಗ ಇಲ್ಲದಂತೆ ಮಾಡಿದ್ದಾರೆ.
ಕಸ ತೆರವಿಗೆ ಮನವಿ ಮಾಡಿದ್ರೆ ಬ್ರಿಡ್ಜ್ ಎಗರಿಸಿಬಿಟ್ಟರು: ಅಧಿಕಾರಿಗಳ ಯಡವಟ್ಟಿಗೆ ಸ್ಥಳೀಯರ ಪರದಾಟ - Bridge is cleared
ನಗರದ ಸೆಟ್ಲಮೆಂಟ್ನ ಗಂಗಾಧರ ನಗರದ 6ನೇ ಕ್ರಾಸ್ ಬಳಿ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದ್ದ ಕಾರಣ ಪಾಲಿಕೆ ಅಧಿಕಾರಿಗಳು ಕಸ ತೆಗೆಯುವುದನ್ನು ಬಿಟ್ಟು ಇದ್ದ ಒಂದು ಬ್ರಿಡ್ಜ್ಅನ್ನು ಜೆಸಿಬಿ ಮೂಲಕ ತೆರೆವುಗೊಳಿಸಿದ್ದಾರೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಓಡಾಡುವುದೇ ದೊಡ್ಡ ಸಾಹಸವಾಗಿದೆ.

ಸುಮಾರು ಒಂದು ವರ್ಷ ಕಳೆದರೂ ಸಹ ಬ್ರಿಡ್ಜ್ ಮರು ನಿರ್ಮಾಣ ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ. ಅದೆಷ್ಟೋ ಬಾರಿ ಇಲ್ಲಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಬ್ರಿಡ್ಜ್ ನಿರ್ಮಿಸಿ ಓಡಾಡಲು ಅನವು ಮಾಡಿಕೊಡಬೇಕೆಂದು ಸ್ಥಳೀಯರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.