ಕರ್ನಾಟಕ

karnataka

By

Published : Jan 30, 2021, 12:41 PM IST

ETV Bharat / state

ರಾಷ್ಟ್ರಧ್ವಜ ತಯಾರಿಸುವ ಖಾದಿ ಕೇಂದ್ರ ಸಂಕಷ್ಟದಲ್ಲಿದೆ: ವಿನಯ್​ ಗುರೂಜಿ ಕಳವಳ- VIDEO

ಕೈ ಮಗ್ಗ ಉಳಿಯಬೇಕು. ನೇಕಾರರಿಗೆ ಕನಿಷ್ಠ ವೇತನ ನಿಗದಿಯಾಗಬೇಕು. ಖಾದಿ-ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದೇವೆ ಎಂದು ಗೌರಿ ಗದ್ದೆ ಆಶ್ರಮದ ವಿನಯ್​ ಗುರೂಜಿ ಹೇಳಿದರು.

Vinay Guruji
ಗೌರಿ ಗದ್ದೆ ಆಶ್ರಮದ ವಿನಯ್​ ಗುರೂಜಿ

ಹುಬ್ಬಳ್ಳಿ: ಸ್ವದೇಶದ ತತ್ವಕ್ಕೆ ಉತ್ತೇಜನ ನೀಡುವ ಮೂಲಕ ಗಾಂಧಿ ಕನಸು ನನಸು ಮಾಡಬೇಕು. ದೇಶದ ಏಕೈಕ ರಾಷ್ಟ್ರ ಧ್ವಜ ಉತ್ಪಾದಿಸುವ ಖಾದಿ ಕೇಂದ್ರ ಈಗ ಸಂಕಷ್ಟದಲ್ಲಿದೆ ಎಂದು ಗೌರಿ ಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಬೇಸರ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್​​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಶಹೀದ್ ದಿವಸ್' ನಿಮಿತ್ತ ರಾಷ್ಟ್ರ ಧ್ವಜ ತಯಾರಿಕರನ್ನ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖಾದಿ- ಉತ್ಪನ್ನ, ಹಾಗೂ ಉತ್ಪಾದಕರಿಗೆ ಮಾನ್ಯತೆ ಸಿಗಬೇಕು. ಧ್ವಜ ಉತ್ಪಾದನೆಯ ಕಾರ್ಮಿಕರಿಗೆ ಎರಡು ತಿಂಗಳ ಆಹಾರದ‌ ಕಿಟ್ ವಿತರಣೆ ಮಾಡಲಾಗುತ್ತದೆ. ಅಲ್ಲದೇ ಖಾದಿ ಉಳಿವಿಗೆ ಸರ್ಕಾರ ಜೊತೆ ಮಾತುಕತೆ ನಡೆಸಲಿದ್ದೇನೆ. ಕೈ ಮಗ್ಗ ಉಳಿಯಬೇಕು. ನೇಕಾರರಿಗೆ ಕನಿಷ್ಠ ವೇತನ ನಿಗದಿಯಾಗಬೇಕು. ಖಾದಿ-ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದೇವೆ ಎಂದು ಅವರು ಹೇಳಿದರು.

ಓದಿ:ಶೃಂಗೇರಿ ಶಾರದಾಪೀಠಕ್ಕೆ ಡಿಕೆಶಿ ಭೇಟಿ.. ಮಗಳ ಮದುವೆ ಆಹ್ವಾನ ಪತ್ರಿಕೆಗೆ ಪೂಜೆ..

ದೇವಸ್ಥಾನದಲ್ಲಿ ಹುಂಡಿ‌ ಇಟ್ಟಂತೆ ರೈತರಿಗೆ ಹುಂಡಿ‌ ಇಡಬೇಕು ಎಂಬ ಕಲ್ಪನೆ ನನ್ನದು. ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸದಾನಂದ ಗೌಡ ಸೇರಿದಂತೆ ಹಲವರಿಗೆ ಪತ್ರ ಬರೆಯಲಾಗಿದೆ ಎಂದು ರೈತರ ಸಂಕಷ್ಟಗಳ ಕುರಿತು ವಿನಯ್ ಗುರೂಜಿ ಮಾಹಿತಿ ನೀಡಿದರು.

ABOUT THE AUTHOR

...view details