ಕರ್ನಾಟಕ

karnataka

ETV Bharat / state

ತನಿಖೆ ಪೂರ್ಣಗೊಳ್ಳುವ ಮುನ್ನ ಸರ್ಕಾರ PSI ನೇಮಕ ರದ್ದು ನಿರ್ಧಾರ ಮಾಡಿದ್ದು ಸರಿಯಲ್ಲ: ಹೆಚ್‌ಡಿಕೆ - ತನಿಖೆ ಪೂರ್ಣಗೊಳ್ಳುವ ಮುನ್ನ ಸರ್ಕಾರ PSI ನೇಮಕ ರದ್ದು ನಿರ್ಧಾರ ಮಾಡಿದ್ದು ಸರಿಯಲ್ಲ ಎಂದ ಹೆಚ್​ಡಿಕೆ

ಪಿಎಸ್‌ಐ ಪರೀಕ್ಷೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆಂಬುದು ಹೊರಗಡೆ ಬರಲಿ. ಸರ್ಕಾರದ ತನಿಖೆ ಪೂರ್ಣಗೊಳ್ಳುವ ಮುನ್ನ ರದ್ದು ನಿರ್ಧಾರ ಮಾಡಿದ್ದು ಸರಿಯಲ್ಲ. ತಪ್ಪಿತಸ್ಥರನ್ನ ಶಿಕ್ಷಿಸಿ, ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ..

Kumaraswamy
ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ ಅಭ್ಯರ್ಥಿಗಳು

By

Published : Apr 29, 2022, 5:04 PM IST

ಹುಬ್ಬಳ್ಳಿ :ಪಿಎಸ್‌ಐ ಪರೀಕ್ಷಾ ಅಕ್ರಮ ಇನ್ನೂ ತನಿಖಾ ಹಂತದಲ್ಲಿದೆ. ಈ ಸಮಯದಲ್ಲಿ ಮರು ಪರೀಕ್ಷೆ ಬೇಡ. ಇಲ್ಲಿ ಸರ್ಕಾರದ ತಪ್ಪಿದೆ ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸರ್ಕಾರ ಸರಿಯಾಗಿ ಪರೀಕ್ಷೆ ನಡೆಸಿಲ್ಲ :ನಗರದಲ್ಲಿಂದು ಮಾತನಾಡಿದ ಅವರು, ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆಂದು ಹೊರಗಡೆ ಬರಲಿ. ಹಣದ ಪಿಶಾಚಿಗಳು, ಬೇಗನೆ ದುಡ್ಡು ಮಾಡಬೇಕೆಂದು ‌ಹೊರಟಿದ್ದಾರೆ. ಯಾರೂ ಹಣ ಕೊಟ್ಟು ನೇಮಕಾತಿ ಆಗಿದ್ದಾರೋ, ಅವರ ಮೇಲೆ ಕ್ರಮ ತೆಗೆದುಕೊಳ್ಳಿ.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಲ್ಲಿ ಅನ್ಯಾಯ ಆಗೋದು ಬೇಡ‌. ಸರ್ಕಾರಕ್ಕೆ ಮೊದಲು ಸರಿಯಾಗಿ ಪರೀಕ್ಷೆಯನ್ನ ನಡೆಸಲು ಆಗಿಲ್ಲ. ಇತ್ತೀಚಿಗೆ ಎಲ್ಲಾ ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಈ ವ್ಯವಸ್ಥೆ ಉಳ್ಳವರಿಗೆ ಮಾತ್ರ, ದುಡ್ಡ ಇರುವವರಿಗೆ ಮಾತ್ರ ಎಂಬಂತಾಗಿದೆ. ಈಗ ಇದು ಹೊಸದಾಗಿ ಪ್ರಾರಂಭವಾಗಿಲ್ಲ, ಇದನ್ನ ಸರಿಪಡಿಸಬೇಕು ಎಂದರು.

ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ ಪಿಎಸ್‌ಐ ಅಭ್ಯರ್ಥಿಗಳು..

ರದ್ದು ನಿರ್ಧಾರ ಸರಿಯಲ್ಲ:ಸರ್ಕಾರದ ತನಿಖೆ ಪೂರ್ಣಗೊಳ್ಳುವ ಮುನ್ನ ರದ್ದು ನಿರ್ಧಾರ ಮಾಡಿದ್ದು ಸರಿಯಲ್ಲ. ತಪ್ಪಿತಸ್ಥರನ್ನ ಶಿಕ್ಷಿಸಿ, ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ. ಯಾರು ಹಣ ಕೊಟ್ಟು, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅಂತರವನ್ನು ಶಿಕ್ಷಿಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮಾತನಾಡುವೆ ಎಂದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್​​ಡಿಕೆ, ಈ ಹಿಂದೆ ಕೆಪಿಎಸ್ಸಿಯಲ್ಲಿ ಪ್ರಾಮಾಣಿಕತೆ ತರುವುದಾಗಿ ಹೇಳಿದ ಸಿದ್ದರಾಮಯ್ಯ ಏನ್ ಮಾಡಿದ್ರು? ಶಾಮ್ ಭಟ್​ರನ್ನ ಕೆಪಿಎಸ್ಸಿ ಚೇರ್ಮನ್ ಮಾಡಿದ್ದು ಯಾಕೆ? ಅರ್ಕಾವತಿ ರಿಡೂ ಮಾಡಿದ್ದಕ್ಕೆ ಶಾಮ್ ಭಟ್​ಗೆ ಕೆಪಿಎಸ್ಸಿ ಗಿಪ್ಟ್ ಕೊಟ್ಟಿದ್ದರು‌. ಒಂದೊಂದು ಪೋಸ್ಟ್​​ಗೆ ಒಂದು ಕೋಟಿ ಫಿಕ್ಸ್ ಮಾಡಿಕೊಂಡು ಕೂತಿದ್ರು. ಶಾಮ್ ಭಟ್ ಎಸಿ ಪೋಸ್ಟ್‌ಗೆ ಇಷ್ಟು, ತಹಶೀಲ್ದಾರ್‌ರ ಪೋಸ್ಟ್‌ಗೆ ಇಷ್ಟು ಅಂತಾ ಫಿಕ್ಸ್ ಮಾಡಿದ್ರು ಎಂದು ಆರೋಪಿಸಿದರು.

ಇದನ್ನೂ ಓದಿ:ದಿವ್ಯಾ ಸೇರಿ 6 ಜನರಿಗೆ ವೈದ್ಯಕೀಯ ತಪಾಸಣೆ : ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದೆ ಸಿಐಡಿ

ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ ಅಭ್ಯರ್ಥಿಗಳು: ಪಿಎಸ್​ಐ ಮರು ಪರೀಕ್ಷೆಗೆ ಸರ್ಕಾರ ಆದೇಶ ಮಾಡಿದ ಹಿನ್ನೆಲೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನ ಪರೀಕ್ಷೆ ಬರೆದ ಅಭ್ಯರ್ಥಿಗಳು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ‌ ಭೇಟಿಯಾಗಿ‌ ತಮ್ಮ ಅಳಲು ತೋಡಿಕೊಂಡರು. ಕುಮಾರಸ್ವಾಮಿ ಎದುರು ಅಭ್ಯರ್ಥಿಗಳು ಕಣ್ಣೀರು ಹಾಕಿದರು. ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ. ಮರು ಪರೀಕ್ಷೆ ಬೇಡ, ತನಿಖೆಯನ್ನು ಒಂದು ಅಲ್ಲ, ಹತ್ತು ಸಲ ಮಾಡಿಸಲಿ. ಪ್ರಾಮಾಣಿಕರಿಗೆ ಅನ್ಯಾಯ ಮಾಡೋದು ಬೇಡ, ನಮ್ಮನ್ನ ಬದುಕಿಸಿ ಎಂದು ಬೇಡಿಕೊಂಡರು.

For All Latest Updates

TAGGED:

ABOUT THE AUTHOR

...view details