ಹುಬ್ಬಳ್ಳಿ : ಅವಳಿ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಜೋರಾಗಿದೆ. ಇಂದು ಬೆಳಗ್ಗೆ ಕಳ್ಳರು ಕೈಚಳಕ ತೋರಿಸಿದ್ದಾರೆ. ವೃದ್ಧೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕಳ್ಳರ ಕೈ ಚಳಕ... ವೃದ್ದೆಯ ಮಾಂಗಲ್ಯ ಸರ ಕಿತ್ತುಕೊಂಡು ಖದೀಮರು ಪರಾರಿ - undefined
ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಕಳ್ಳರು ಕೈಚಳಕ ತೋರಿಸಿದ್ದಾರೆ. ವಿಶ್ವೇಶ್ವರಯ್ಯನಗರದ ಓಲ್ಡ್ ಎಂಪ್ಲಾಯ್ಮೆಂಟ್ ಕಚೇರಿ ಬಳಿ ವೃದ್ಧೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
![ಕಳ್ಳರ ಕೈ ಚಳಕ... ವೃದ್ದೆಯ ಮಾಂಗಲ್ಯ ಸರ ಕಿತ್ತುಕೊಂಡು ಖದೀಮರು ಪರಾರಿ](https://etvbharatimages.akamaized.net/etvbharat/images/768-512-3063154-thumbnail-3x2-robb.jpg)
ವೃದ್ದೆಯ ಮಾಂಗಲ್ಯ ಸರ ಕಿತ್ತು ಪರಾರಿ
ವೃದ್ಧೆಯ ಮಾಂಗಲ್ಯ ಸರ ಎಗರಿಸಿದ ಖದೀಮರು
ವಿಶ್ವೇಶ್ವರಯ್ಯನಗರದ ಘಟನೆ ನಡೆದಿದೆ. ರಾಜಾಬಾಯಿ ಬುರಲಿ ಎಂಬುವರು ಮಾಂಗಲ್ಯ ಸರ ಕಳೆದುಕೊಂಡಿರುವ 65 ವರ್ಷದ ವರ್ಷದ ವೃದ್ದೆ. ಅವರ ಕೊರಳಿನಿಂದ 140 ಗ್ರಾಂ. ಚಿನ್ನದ ಸರ ಕೊರಳಿಂದ ಕಿತ್ತುಕೊಂಡು ಸರಗಳ್ಳರು ಪರಾರಿಯಾಗಿದ್ದಾರೆ.
ಪಲ್ಸರ್ ಬೈಕ್ನಲ್ಲಿ ಬಂದ ಕಳ್ಳರಿಬ್ಬರು ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ. ಮಾಜಿ ಸಂಸದ ಐ ಜಿ ಸನದಿ ಮನೆ ಮುಂದೆ ಕಳ್ಳರು ಈ ಕೃತ್ಯವೆಸಗಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದಾರೆ. ಅಶೋಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.