ಹುಬ್ಬಳ್ಳಿ:ಭಿಕ್ಷುಕರನ್ನು ಕಂಡರೆ ಸಾಕು ಅಡಿಯಷ್ಟು ದೂರು ನಿಲ್ಲುವ ಕಾಲವಿದು. ಕೊರೊನಾ ಬಂದ ನಂತರ ಒಬ್ಬರಿಗೊಬ್ಬರು ಮುಖಕೊಟ್ಟು ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹದ್ದರಲ್ಲಿ ಇದ್ಯಾವುದನ್ನು ಲೆಕ್ಕಿಸದೇ ನಗರದ ವೈದ್ಯರೊಬ್ಬರು ಭಿಕ್ಷುಕನಿಗೆ ಉಪಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭಿಕ್ಷುಕನ ಅವ್ಯವಸ್ಥೆ ಕಂಡು ಮರುಗಿದ ಮನಸು... ಆಹಾರ, ಬಟ್ಟೆ ನೀಡಿ ಮಾನವೀಯತೆ ಮೆರೆದ ಹುಬ್ಬಳ್ಳಿ ವೈದ್ಯ - ಹುಬ್ಬಳ್ಳಿ ಭಿಕ್ಷುಕ
ಕೈ-ಕಾಲಿಗೆ ತಂತಿ ಮತ್ತು ಹಗ್ಗ ಕಟ್ಟಿಕೊಂಡು ಸುತ್ತಾಡುತ್ತಿದ್ದ ಭಿಕ್ಷುಕನೊಬ್ಬನಿಗೆ ಹುಬ್ಬಳ್ಳಿಯ ವೈದ್ಯನೊಬ್ಬ ಉಪಚಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭಿಕ್ಷುಕನಿಗೆ ಆಹಾರ ಬಟ್ಟೆ ನೀಡಿ ಮಾನವೀಯತೆ ಹುಬ್ಬಳ್ಳಿ ವೈದ್ಯ
ನಗರದ ಕೇಶ್ವಾಪುರದಲ್ಲಿ ಮಾನಸಿಕ ಅಸ್ವಸ್ಥನಾಗಿರುವ ಭಿಕ್ಷುಕ ತನ್ನ ಕೈ-ಕಾಲಿಗೆ ತಂತಿ, ಹಗ್ಗ ಕಟ್ಟಿಕೊಂಡು ಸುತ್ತಾಡುತ್ತಿದ್ದ. ಇದನ್ನು ಕಂಡ ನಗರದ ಡಾ. ಎಂ.ಜಿ. ಜೇಡರ್ ಎಂಬ ವೈದ್ಯರು ಈತನ ಅವಸ್ಥೆ ನೋಡಿ, ಕೈ ಮತ್ತು ಕಾಲಿಗೆ ಕಟ್ಟಿಕೊಂಡಿದ್ದ ತಂತಿ ಮತ್ತು ಹಗ್ಗವನ್ನು ಬಿಚ್ಚಿ, ಆತನಿಗೆ ಬಟ್ಟೆಯನ್ನು ಹಾಕುವುದರ ಜೊತೆಗೆ ತಿನ್ನಲು ಹಣ್ಣುಗಳು ಕೊಟ್ಟು ಉಪಚರಿಸಿದ್ದಾರೆ. ಅಷ್ಟೇ ಅಲ್ಲದೆ, ಆತನಿಗೆ ಕಟಿಂಗ್ ಮಾಡಿಸಿಕೊಳ್ಳಲು ಸ್ವಲ್ಪ ಹಣ ನೀಡಿ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Aug 10, 2020, 11:41 PM IST