ಧಾರವಾಡ:ಪಾಟೀಲ್ ಪುಟ್ಟಪ್ಪ ಅವರ ಪಾರ್ಥೀವ ಶರೀರ ಜಿಲ್ಲೆಯ ವಿದ್ಯಾವರ್ಧಕ ಸಂಘದ ಆವರಣಕ್ಕೆ ಆಗಮಿಸಿತು.
ಪಾರ್ಥೀವ ಶರೀರವನ್ನು ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಹಿರಿಯ ಕವಿ ಚನ್ನವೀರ ಕಣವಿ ಹಾಗೂ ಮಠಾಧೀಶರು ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಪಾಪು ನಿಧನ: ಧಾರವಾಡಕ್ಕೆ ಆಗಮಿಸಿದ ಪಾರ್ಥೀವ ಶರೀರ ಮಾಜಿ ಸಚಿವ ವಿನಯ ಕುಲಕರ್ಣಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಪಾಟೀಲ ಪುಟ್ಟಪ್ಪನವರು ನಾಡಿಗೆ ಮತ್ತು ಕನ್ನಡದ ಬಗ್ಗೆ ಅನ್ಯಾಯವಾದಾಗ ಧ್ವನಿ ಎತ್ತಿದ್ದರು. ನಮ್ಮ ಭಾಗಕ್ಕೆ ಅನ್ಯಾಯವಾದಾಗ ತಕ್ಷಣ ಮುಂದಾಗುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೇ, ಅನ್ಯಾಯವಾದಾಗ ರಾಜಕಾರಣಿಗಳನ್ನು ಎಚ್ಚರಗೊಳಿಸುವ ಕಾರ್ಯ ಮಾಡಿದ್ದಾರೆ. ಯಾವುದೇ ವಿಷಯ ಇದ್ದರೂ ನೇರವಾಗಿ ಹೇಳುತ್ತಿದ್ದರು. ಎಲ್ಲ ಪಕ್ಷದ ರಾಜಕಾರಣಿಗಳ ಮೇಲೆ ಅವರ ಹಿಡಿತ ಇದ್ದು, ಅನೇಕ ರಾಜಕಾರಣಿಗಳು ತಪ್ಪು ದಾರಿ ಹಿಡಿದಾಗ ಅವರನ್ನು ತಿದ್ದುವ ಕೆಲಸ ಮಾಡಿದ್ದಾರೆ.
ಇನ್ನೂ ಈ ವೇಳೆ ಸರ್ಕಾರ ಶೋಕಾಚರಣೆ ಘೋಷಣೆ ಮಾಡಬೇಕು, ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಆಗ್ರಹಿಸಿದರು.