ಧಾರವಾಡ:ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣ ಹಿನ್ನೆಲೆ ಧಾರವಾಡಕ್ಕೆ ಸಿಬಿಐ ಅಧಿಕಾರಿಗಳ ತಂಡ ಪುನಃ ಆಗಮಿಸಿದ್ದು, ಇಂದು ವಿವಿಧ ಕಡೆಗಳಲ್ಲಿ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಧಾರವಾಡಕ್ಕೆ ಮತ್ತೆ ಆಗಮಿಸಿದ ಸಿಬಿಐ: ಕುತೂಹಲ ಕೆರಳಿಸಿದ ಅಧಿಕಾರಿಗಳ ಭೇಟಿ - cbi group came to darwad
ಯೋಗೀಶ ಗೌಡ ಕೊಲೆ ಪ್ರಕರಣ ಹಿನ್ನೆಲೆ ಧಾರವಾಡಕ್ಕೆ ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ.
ಧಾರವಾಡಕ್ಕೆ ಮತ್ತೆ ಆಗಮಿಸಿದ ಸಿಬಿಐ: ಕುತೂಹಲ ಕೆರಳಿಸಿದ ಅಧಿಕಾರಿಗಳ ಆಗಮನ
ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದು, ಕೆಲವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಮೊನ್ನೆಯಷ್ಟೇ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಅವರನ್ನು ಬೆಂಗಳೂರಿನಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು. ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಬಂದಿರುವ ಹಿನ್ನೆಲೆ ಧಾರವಾಡದಲ್ಲಿ ಭಾರೀ ಕುತೂಹಲ ಕೆರಳಿಸಿದೆ.