ಹುಬ್ಬಳ್ಳಿ:ಭಾರತೀಯ ಜನತಾ ಪಕ್ಷ ಸಣ್ಣಪುಟ್ಟ ಪಕ್ಷಗಳ ಮೇಲೆ ತನ್ನ ಪ್ರಾಬಲ್ಯ ಮೆರೆಯಲು ಹಾಗೂ ಇತರ ಪಕ್ಷಗಳ ರಾಜಕೀಯ ಪ್ರಭಾವಿಗಳನ್ನು ತುಳಿಯಲು ಸಿಬಿಐ, ಇಡಿ ಇಲಾಖೆಗಳ ಮೂಲಕ ಕಿರುಕುಳ ನೀಡುವುದು ಸಹಜ ಪ್ರಕ್ರಿಯೆಯಾಗಿದೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ದೂರಿದರು.
ರಾಜಕೀಯ ಪ್ರಭಾವಿಗಳನ್ನು ತುಳಿಯಲು ಬಿಜೆಪಿ ಸಿಬಿಐ ಬಳಸಿಕೊಳ್ಳುತ್ತಿದೆ: ಕೋನರೆಡ್ಡಿ ಆರೋಪ - ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ಬಂಧನ
ಬಿಜೆಪಿ ಪಕ್ಷ ಸಣ್ಣಪುಟ್ಟ ಪಕ್ಷಗಳ ಮೇಲೆ ತನ್ನ ಪ್ರಾಬಲ್ಯ ಮೆರೆಯಲು ಹಾಗೂ ಇತರ ಪಕ್ಷಗಳ ರಾಜಕೀಯ ಪ್ರಭಾವಿಗಳನ್ನು ತುಳಿಯಲು ಸಿಬಿಐಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎನ್.ಹೆಚ್.ಕೋನರೆಡ್ಡಿ ಆರೋಪಿಸಿದ್ದಾರೆ.

ರಾಜಕೀಯ ಪ್ರಭಲರನ್ನು ತುಳಿಯಲು ಬಿಜೆಪಿ ಸಿಬಿಐ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ : ಎನ್ ಹೆಚ್ ಕೊನರೆಡ್ಡಿ
ರಾಜಕೀಯ ಪ್ರಭಾವಿಗಳನ್ನು ತುಳಿಯಲು ಬಿಜೆಪಿ ಸಿಬಿಐ ಬಳಸಿಕೊಳ್ಳುತ್ತಿದೆ: ಕೋನರೆಡ್ಡಿ ಆರೋಪ
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ಬಂಧನ ವಿಚಾರದ ಹಿನ್ನೆಲೆಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿನಯ್ ಕುಲಕರ್ಣಿ ನಮ್ಮ ಕ್ಷೇತ್ರದವರು, ಅಂದರೆ ನಾಯಕನೂರಿನವರು. ಅಂತಹ ತಪ್ಪು ಮಾಡಿಲ್ಲ ಅಂತ ಸ್ವತಃ ವಿನಯ್ ಕುಲಕರ್ಣಿ ಅವರೇ ನನಗೆ ಹೇಳಿದ್ದಾರೆ. ಆದರೂ ಬಂಧನ ಮಾಡಿದ್ದಾರೆ. ಮಾಡಲಿ, ಸತ್ಯಾಸತ್ಯತೆ ಗೊತ್ತಾಗಲಿ ಎಂದರು.
ಕಾನೂನು ಎಲ್ಲರಿಗು ಒಂದೇ. ಇದರಲ್ಲಿ ರಾಜಕೀಯ ಮಾಡಬಾರದು. ಇಂತಹ ಸಂಸ್ಥೆಗಳನ್ನು ಅಧಿಕಾರಕ್ಕೆ ಬಂದಾಗ ಪಕ್ಷಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದರು.
Last Updated : Nov 6, 2020, 4:50 PM IST