ಧಾರವಾಡ :ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕುಸ್ತಿ ಹಬ್ಬಕ್ಕೆ ಅಜರ್ ಬೈಜಾನ್ ದೇಶದ ಇಬ್ಬರು ಮಹಿಳಾ ಕುಸ್ತಿಪಟುಗಳು ಆಗಮಿಸಿದ್ದಾರೆ.
ಕವಿಗಳ ಊರು ಧಾರವಾಡದೊಳಗೆ ಕುಸ್ತಿಹಬ್ಬ.. ವಿದೇಶಿ ಪೈಲ್ವಾನಗಳೊಂದಿಗೆ ಸೆಲ್ಫಿ ಕ್ರೇಜ್! - ಸೆಲ್ಫಿ ಹೊಡೆದುಕೊಂಡ ಯುವ ಪೈಲ್ವಾನರು
ಅಜರ್ ಬೈಜಾನ್ ದೇಶದ ಜಿಯಾಲ್ ನಾಡಿಗ್ಜ ಹಾಗೂ ಸಬೀರಾ ಅಲಿಯೆವಾ ಅಲಹವರ್ಡಿ ನೋಡಲು ಕುಸ್ತಿ ಅಭಿಮಾನಿಗಳ ನೂಕು ನುಗ್ಗಲು ನಡೆಸಿದರು. ಅಲ್ಲದೇ ಅವರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟರು. ಇವರು ದೇಸಿ ಗರಡಿ ಮನೆಗೆ ಭೇಟಿ ನೀಡಿ ಪ್ರ್ಯಾಕ್ಟೀಸ್ ನಡೆಸಿದರು.
![ಕವಿಗಳ ಊರು ಧಾರವಾಡದೊಳಗೆ ಕುಸ್ತಿಹಬ್ಬ.. ವಿದೇಶಿ ಪೈಲ್ವಾನಗಳೊಂದಿಗೆ ಸೆಲ್ಫಿ ಕ್ರೇಜ್! The arrival of foreign wrestlers to Darwad](https://etvbharatimages.akamaized.net/etvbharat/prod-images/768-512-6199579-thumbnail-3x2-dwd.jpg)
ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣಕ್ಕೆ ಅವರು ಆಗಮಿಸಿದ್ದು, ಅಜರ್ ಬೈಜಾನ್ ದೇಶದ ಜಿಯಾಲ್ ನಾಡಿಗ್ಜ ಹಾಗೂ ಸಬೀರಾ ಅಲಿಯೆವಾ ಅಲಹವರ್ಡಿ ನೋಡಲು ಕುಸ್ತಿ ಅಭಿಮಾನಿಗಳು ನೂಕು ನುಗ್ಗಲು ನಡೆಸಿದರು. ಅಲ್ಲದೇ ಅವರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟರು. ಇವರು ದೇಸಿ ಗರಡಿ ಮನೆಗೆ ಭೇಟಿ ನೀಡಿ ಪ್ರ್ಯಾಕ್ಟೀಸ್ ನಡೆಸಿದರು.
ಧಾರವಾಡ ಒಳ್ಳೆಯ ಸಿಟಿ. ಕರ್ನಾಟಕ ಬೆಸ್ಟ್. ಐ ಲವ್ ಇಂಡಿಯಾ ಎಂದು ಕುಸ್ತಿಪಟು ಜಿಯಾಲ್ ನಾಡಿಗ್ಜ ಸಂತಸ ವ್ಯಕ್ತಪಡಿಸಿದರು. ಬಳಿಕ ಅವರ ತರಬೇತುದಾರ ರಾಕೇಶ ಪಟೇಲ್ ಮಾತನಾಡಿ, ಎರಡನೇ ಬಾರಿಗೆ ಭಾರತಕ್ಕೆ ಈ ಇಬ್ಬರು ಅಂತಾರಾಷ್ಟ್ರೀಯ ಕುಸ್ತಿಪಟುಗಳು ಬಂದಿದ್ದಾರೆ. ಇವರು ಅತ್ಯಂತ ಉತ್ಸಾಹದಿಂದ ಕುಸ್ತಿಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.