ಕರ್ನಾಟಕ

karnataka

ETV Bharat / state

ಚಳಿಗಾಲ ಅಧಿವೇಶನದ ಹಿನ್ನೆಲೆ ಜುಲೈ 18 ರಂದು ಸರ್ವಪಕ್ಷ ಸಭೆ : ಸಚಿವ ಪ್ರಲ್ಹಾದ್ ಜೋಶಿ

ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆರೋಗ್ಯ ಸಚಿವರು ಉತ್ತಮ ಕೆಲಸ ಮಾಡಿದ್ದಾರೆ. ಹೊಸ ಮುಖಗಳಿಗೆ ಅವಕಾಶ ಕೊಡುವ ಕೆಲಸ ಮಾಡಿದ್ದಾರೆ. ಅಲ್ಲದೆ ಡಾ.ಹರ್ಷವರ್ಧನ್ ಉತ್ತಮ ಕೆಲಸ ಮಾಡಿದ್ದಾರೆ..

ಸಚಿವ ಪ್ರಲ್ಹಾದ ಜೋಶಿ ಹೇಳಿಕೆ
ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

By

Published : Jul 10, 2021, 3:49 PM IST

ಹುಬ್ಬಳ್ಳಿ :ಮಳೆಗಾಲದ ಅಧಿವೇಶನದ ಹಿನ್ನೆಲೆ ಜುಲೈ 18ರಂದು ಸರ್ವಪಕ್ಷ ಸಭೆ ಕರೆದಿದ್ದೇವೆ. ಸುಮಾರು 20ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲಿದ್ದೇವೆ ಎಂದು ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಮುಂಗಾರು ಅಧಿವೇಶನ ಕುರಿತಂತೆ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ..

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದಲ್ಲಿಯೇ ಅತೀ ದೊಡ್ಡ ಲಸಿಕಾಭಿಯಾನ ಮಾಡಿದ್ದೇವೆ. 37 ಕೋಟಿಯಷ್ಟು ವ್ಯಾಕ್ಸಿನ್ ನೀಡಿದ್ದೇವೆ. ಎಲ್ಲರಿಗೂ ವ್ಯಾಕ್ಸಿನ್ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆರೋಗ್ಯ ಸಚಿವರು ಉತ್ತಮ ಕೆಲಸ ಮಾಡಿದ್ದಾರೆ. ಹೊಸ ಮುಖಗಳಿಗೆ ಅವಕಾಶ ಕೊಡುವ ಕೆಲಸ ಮಾಡಿದ್ದಾರೆ. ಅಲ್ಲದೆ ಡಾ.ಹರ್ಷವರ್ಧನ್ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ದೆಹಲಿಗೆ ಹೋಗೋ ಅಗತ್ಯವಿಲ್ಲ. ಯಾರೋ ಒಬ್ಬರು ಹೋಗಿರಬಹುದು. ಅವರ ವೈಯುಕ್ತಿಕ ಕೆಲಸಕ್ಕೆ ಹೋಗಿರಬಹುದು. ನಮ್ಮ ಮೊದಲ ಆದ್ಯತೆ ಕೊರೊನಾ ನಿವರ್ಹಣೆ, ಈ ವಿಚಾರದಲ್ಲಿ ಬಿಎಸ್‌ವೈ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರು.

ಸುಮಲತಾ- ಹೆಚ್​ಡಿಕೆ ವಾಕ್ಸಮರ ವಿಚಾರವಾಗಿ ಮಾತನಾಡಿದ ಅವರು, ಇದೊಂದು ಅನಗತ್ಯ ವಿಚಾರ. ಡ್ಯಾಂ ಬಿರುಕು ಬಿಟ್ಟಿದೆ ಅಂತಾ ಹೇಳುವುದಕ್ಕೆ ಎಕ್ಸಫಟ್೯ ಕಮಿಟಿಯಿದೆ. ಅದಕ್ಕೆ ಪ್ರತಿಕ್ರಿಯೆ ಕೊಡುವ ಅಗತ್ಯ ಯಾರಿಗೂ ಇಲ್ಲ. ದೂರು ದುಮ್ಮಾನೆ ಇದ್ದರೆ ಸಂಬಂಧಿಸಿದ ಪ್ರಾಧಿಕಾರಕ್ಕೆ ನೀಡಲಿ. ಮಾಧ್ಯಮಗಳ ಎದುರು ಚರ್ಚೆ ಬೇಡ ಎಂದ ಅವರು, ಹೆಚ್ಡಿಕೆ-ಸುಮಲತಾ ಇಬ್ಬರು ಅನಗತ್ಯ ಚರ್ಚೆ ಮಾಡಬೇಡಿ ಎಂದು ಸಲಹೆ ನೀಡಿದರು.

ABOUT THE AUTHOR

...view details