ಹುಬ್ಬಳ್ಳಿ:ನಗರದಲ್ಲಿ ವಿಭಿನ್ನ ರೀತಿಯಲ್ಲಿ ಮಕ್ಕಳು ಕಲಿಕೆಯನ್ನು ಆರಂಭಿಸಿದ್ದಾರೆ. 200ಕ್ಕೂ ಅಧಿಕ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಡಿಯೋ ಕಾಲ್ ಮೂಲಕ ಕಲಿಕಾ ಶಕ್ತಿಯನ್ನ ಅಗಸ್ತ್ಯಾ ಫೌಂಡೇಶನ್ ಹೆಚ್ಚಿಸುತ್ತಿದೆ.
ಅಗಸ್ತ್ಯಾ ಫೌಂಡೇಶನ್‌ನಿಂದ ವಿಡಿಯೋ ಕಾಲ್ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಟೀಚಿಂಗ್..
ಲಾಕ್ಡೌನ್ ಹಿನ್ನೆಲೆ ಎಲ್ಲರೂ ಮನೆಯಲ್ಲಿರುವ ಕಾರಣ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯಬಾರದು ಎನ್ನುವ ನಿಟ್ಟಿನಲ್ಲಿ ವಿಡಿಯೋ ಕಾಲ್ ಮೂಲಕ ಅವರಿಗೆ ಹಲವಾರು ರೀತಿಯ ಕಲಿಕಾ ತರಬೇತಿ ಕೊಡಲಾಗುತ್ತಿದೆ.
ಅಗಸ್ತ್ಯಾ ಫೌಂಡೇಶನ್
ನಗರದಲ್ಲಿ ಎಲ್ಕೆಜಿ ಯಿಂದ ಎಸ್ಎಸ್ಎಲ್ಸಿವರೆಗೂ ಕೋಚಿಂಗ್ ನೀಡಲಾಗುತ್ತಿದೆ. ಈ ಒಂದು ಕಾರ್ಯವನ್ನು ಹಳ್ಳಿಯ ಮಕ್ಕಳು ಸಹ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಹೊಸ ಹೊಸ ಬಗೆಯ ಕಲಿಕೆ ಕಲಿಯಲು ಈ ಸಂಸ್ಥೆ ಸಹಾಯಕವಾಗಿದೆ. ಲಾಕ್ಡೌನ್ ಹಿನ್ನೆಲೆ ಎಲ್ಲರೂ ಮನೆಯಲ್ಲಿರುವ ಕಾರಣ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯಬಾರದು ಎನ್ನುವ ನಿಟ್ಟಿನಲ್ಲಿ ವಿಡಿಯೋ ಕಾಲ್ ಮೂಲಕ ಅವರಿಗೆ ಹಲವಾರು ರೀತಿಯ ಕಲಿಕಾ ತರಬೇತಿ ಕೊಡಲಾಗುತ್ತಿದೆ.