ಕರ್ನಾಟಕ

karnataka

ETV Bharat / state

ಶಿಕ್ಷಕರ ಧರಣಿ ವಾಪಸ್: ಫಲ ನೀಡಿದ ಸಚಿವ ಸಿ.ಸಿ.ಪಾಟೀಲ್ ಮನವೊಲಿಕೆ ಯತ್ನ - ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಸರ್ಕಾರದ ಪರವಾಗಿ ಸಚಿವ ಸಿ.ಸಿ.ಪಾಟೀಲ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರ ಮನವೊಲಿಸಿ ಹಿಂಪಡೆಸಿದ್ದಾರೆ. ಶಿಕ್ಷಕರ ಸಂಘದ ವತಿಯಿಂದ ವಿವಿಧ ಜಿಲ್ಲೆಯ ಶಿಕ್ಷಕರ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಗುತ್ತಿತ್ತು.

Teachers withdrawn their protest at Dharwad
ಶಿಕ್ಷಕರ ಧರಣಿ ವಾಪಸ್

By

Published : Dec 17, 2020, 1:41 PM IST

Updated : Dec 17, 2020, 2:26 PM IST

ಧಾರವಾಡ: ಶಿಕ್ಷಕರ ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯದ ವಿವಿಧ ಸಂಘಟನೆಗಳು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆದುಕೊಂಡಿದ್ದಾರೆ.

ಶಿಕ್ಷಕರ ಧರಣಿ ವಾಪಸ್

ಸರ್ಕಾರದ ಪರವಾಗಿ ಸಚಿವ ಸಿ.ಸಿ.ಪಾಟೀಲ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರ ಮನವೊಲಿಸಿ ಹಿಂಪಡೆಸಿದ್ದಾರೆ. ಶಿಕ್ಷಕರ ಸಂಘದ ವತಿಯಿಂದ ವಿವಿಧ ಜಿಲ್ಲೆಯ ಶಿಕ್ಷಕರ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಗುತ್ತಿತ್ತು.

ಶಿಕ್ಷಕರು ಹಾಗೂ ಶಿಕ್ಷಣರಂಗದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಕೋವಿಡ್ ಕಾರಣದಿಂದ ಶಿಕ್ಷಣ ಕೇತ್ರದ ಮೇಲೆ ಉಂಟಾಗಿರುವ ಪರಿಣಾಮಗಳಿಂದ ಶಿಕ್ಷಕರೂ ಕೂಡ ಪರಿತಪಿಸುವಂತಾಗಿರುವುದು ಸರ್ಕಾರದ ಗಮನದಲ್ಲಿದೆ. ಮುಂಬರುವ ಮೂರು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಿಕ್ಷಕರ ಸಂಘಟನೆಗಳು ನಡೆಸುತ್ತಿರುವ ಹೋರಾಟ ಕೈಬಿಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿಕೊಂಡ ಬಳಿಕ ಧರಣಿ ಹಿಂಪಡೆದರು.

ಓದಿ: ಬೆಳಗಾವಿ: ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಯತ್ನ

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್​ ಕುಮಾರ್​ ಅವರು ನೀಡಿರುವ ಪತ್ರವನ್ನು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಹಸ್ತಾಂತರಿಸಿದ ಸಚಿವ ಸಿ.ಸಿ.ಪಾಟೀಲ, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲೆಗಳ ಶಿಕ್ಷಕರಿಗೂ ವಿಸ್ತರಿಸುವುದು. ಕಾಲ್ಪನಿಕ ವೇತನ ಅನುಷ್ಠಾನದಿಂದ ಆಗುವ ಆರ್ಥಿಕ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ತಯಾರಿಸಲಾಗುವುದು. ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಯ ಸೇವಾ ಭದ್ರತೆಗೆ ಕಠಿಣ ಸುತ್ತೋಲೆಯೊಂದಿಗೆ ವಿಚಕ್ಷಣಾ ವ್ಯವಸ್ಥೆ ಮತ್ತಿತರ ಕ್ರಮಗಳ ಬಗ್ಗೆ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿ, ಸಚಿವರು ಖುದ್ದಾಗಿ ಬಂದು ಮಾತನಾಡಿರುವುದು ಸಮಾಧಾನ ತಂದಿದೆ. ಧರಣಿಯನ್ನು ಸದ್ಯ ಮೊಟಕುಗೊಳಿಸಲಾಗುವುದು ಎಂದರು.

Last Updated : Dec 17, 2020, 2:26 PM IST

ABOUT THE AUTHOR

...view details