ಕರ್ನಾಟಕ

karnataka

ETV Bharat / state

ಮಾಸ್ಕ್ ಹಾಕದವರಿಗೆ ದಂಡ ಹಾಕಿದ ತಹಶೀಲ್ದಾರ್​! - ಮಾಸ್ಕ್ ಹಾಕದವರಿಗೆ ದಂಡ ಹಾಕಿದ ತಹಶೀಲ್ದಾರ್​

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಾಸ್ಕ್ ಹಾಕದವರಿಗೆ ತಹಶೀಲ್ದಾರ್​​ ಡಾ.ಸಂತೋಷ ಬಿರಾದಾರ ದಂಡ ಹಾಕಿದ್ದಾರೆ.

Darwad
ಮಾಸ್ಕ್ ಹಾಕದವರಿಗೆ ದಂಡ ಹಾಕಿದ ತಹಶೀಲ್ದಾರ್​

By

Published : Aug 6, 2020, 9:13 PM IST

ಧಾರವಾಡ: ಕೊರೊನಾ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ. ಮಾಸ್ಕ್ ಹಾಕದವರಿಗೆ ದಂಡ ಕೂಡ ವಿಧಿಸಲಾಗುತ್ತಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕಲು ಸ್ವತಃ ತಹಶೀಲ್ದಾರ್​​ ಡಾ.ಸಂತೋಷ ಬಿರಾದಾರ ಅವರೇ ರಸ್ತೆಗಿಳಿದಿದ್ದಾರೆ.

ಈಗಾಗಲೇ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಎರಡು ಏರಿಯಾಗಳನ್ನು ಸೀಲ್​ಡೌನ್ ಕೂಡ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಕೂಡ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಬೇಕು ಎಂದು ಡಂಗುರ ಸಾರಿದೆ. ಇಂದು ಅನಿರೀಕ್ಷಿತವಾಗಿ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ ಬಿರಾದಾರ, ಮಾಸ್ಕ್ ಹಾಕದೇ ಸುತ್ತಾಡುತ್ತಿರುವವರನ್ನು ತಡೆದು ಅವರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುವ ಜೊತೆಗೆ ದಂಡ ಕೂಡ ಹಾಕಿದರು.

ABOUT THE AUTHOR

...view details