ಕರ್ನಾಟಕ

karnataka

ETV Bharat / state

ಮರಳು ಕಲಾಕೃತಿಯ ಮೂಲಕ ಮತದಾನ ಜಾಗೃತಿಗೆ ಮುಂದಾದ ಸ್ವೀಪ್ ಸಮಿತಿ - undefined

ಸ್ವೀಪ್ ಸಮಿತಿ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇಂದು ಧಾರವಾಡದ ಕೆಸಿಡಿ ಆವರಣದಲ್ಲಿ ಮತದಾನಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಮರಳಿನಲ್ಲಿ ರಚಿಸಿ ಮತದಾನದ ಮಹತ್ವವನ್ನು ಸಾರುತ್ತಿದೆ.

ಮರಳಿನಲ್ಲಿ ಅರಳಿರುವ ಮತದಾನ ಜಾಗೃತಿ ಮೂಡಿಸುವ ಕಲಾಕೃತಿಗಳು

By

Published : Apr 11, 2019, 2:56 PM IST

ಧಾರವಾಡ:ಜಿಲ್ಲಾ ಸ್ವೀಪ್ ಸಮಿತಿ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಾನಾ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಇಂದು ಕರ್ನಾಟಕ ಕಾಲೇಜು ವೃತ್ತದಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸಿ ಜಾಗೃತಿ ಮೂಡಿಸುತ್ತಿದೆ.

ಮರಳಿನಲ್ಲಿ ಅರಳಿರುವ ಮತದಾನ ಜಾಗೃತಿ ಮೂಡಿಸುವ ಕಲಾಕೃತಿಗಳು

ಇಂದು ಕರ್ನಾಟಕ ಕಾಲೇಜು ವೃತ್ತದಲ್ಲಿ ನಡೆಯುತ್ತಿರುವ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಓ ಡಾ. ಬಿ.ಸಿ. ಸತೀಶ್​ ಚಾಲನೆ ನೀಡಿದರು. ಕೆಲಗೇರಿ ಗಾಯತ್ರಿಪುರಂ ಕಲಾವಿದ ಮಂಜುನಾಥ ಹಿರೇಮಠ ಹಾಗೂ ಮಂಜುನಾಥ ಅವರ ಮಗ ಮರಳಿನಲ್ಲಿ ಮತದಾನದ ಕುರಿತಾದ ಕಲಾಕೃತಿಗಳನ್ನು ರಚಿಸಿದ್ದಾರೆ. ಮುಖ್ಯವಾಗಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಯಂತ್ರ, ಬೆರಳಿಗೆ ಶಾಹಿ ಹಾಕಿಸಿಕೊಂಡ ಕಲಾಕೃತಿಗಳನ್ನು ರಚಿಸಿ ಮತದಾರರ ಗಮನ ಸೆಳೆಯುತ್ತಿದ್ದಾರೆ.

ಮಂಜುನಾಥ ರಚಿಸಿರುವ ಈ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿದ್ದು, ಯುವಜನರು, ಸಾರ್ವಜನಿಕರು ಮರಳು ಶಿಲ್ಪದ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಈ ಮರಳು ಕಲಾಕೃತಿ ಪ್ರದರ್ಶನ ನಡೆಯಲಿದೆ.

For All Latest Updates

TAGGED:

ABOUT THE AUTHOR

...view details