ಧಾರವಾಡ :ಸ್ವೀಡನ್ ಪ್ರಜೆಯೊಬ್ಬರು ಧಾರವಾಡದಲ್ಲಿ ತಮ್ಮವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ದಂಪತಿಯೊಂದು ಇವರನ್ನು ದತ್ತು ಪಡೆದಿದ್ದರು. ಇದೀಗ ಈ ವ್ಯಕ್ತಿ ತನ್ನ ಮೂಲ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಪಂತು ಜೋಹಾನ್ ಪಾಮ್ಕ್ವಿಸ್ಟ್ ಎಂಬ 40 ವರ್ಷದ ವ್ಯಕ್ತಿಯನ್ನು 1980ರ ದಶಕದ ಸುಮಾರಿಗೆ ಸ್ವೀಡನ್ ದಂಪತಿ ದತ್ತು ಪಡೆದು ಸ್ವೀಡನ್ಗೆ ಕರೆದುಕೊಂಡು ಹೋಗಿದ್ದರು. ಈ ಪಂತು ಧಾರವಾಡದ ವ್ಯಕ್ತಿ, ಮೂರು ವರ್ಷದ ಪುಟ್ಟ ಮಗುವಾಗಿದ್ದಾಗ ಹೋಗಿದ್ದ ಪಂತುವಿಗೆ ಈಗ ಏನೂ ನೆನಪಿಲ್ಲ, ತನ್ನನ್ನು ಪಂತು ಎಂದು ಕರೆಯುತ್ತಿದ್ದರೇನೋ ಎಂದು ನೆನಪಿಸಿಕೊಳ್ಳುತ್ತಾರೆ. ಪಂತು ಸದ್ಯ ಸ್ವೀಡನ್ನಲ್ಲಿ ಚಿತ್ರಕಲಾವಿದನಾಗಿದ್ದಾರೆ.
ಇದೀಗ ಪಂತುಗೆ ಮೂಲ ಪಾಲಕರ ನೆನಪು ಕಾಡುತ್ತಿದೆ. ತನ್ನ ಬಾಲ್ಯದ ಫೋಟೋ ಸಮೇತ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಪಂತು, ನನ್ನ ಬಳಿ ದಾಖಲೆಗಳಿಲ್ಲ. ಇದೊಂದೇ ಫೋಟೋ ಇರೋದು. ನನ್ನವರು ಯಾರಾದ್ರೂ ಇದ್ರೆ ಪ್ಲೀಸ್ ನನ್ನ ಮೂಲ ತಿಳಿಸಿ, ಸಹಾಯಕ್ಕೆ ಬನ್ನಿ.