ಕರ್ನಾಟಕ

karnataka

ETV Bharat / state

ಮರಳಿನಲ್ಲಿ ಅರಳಿದ ವಿವೇಕಾನಂದ ಕಲಾಕೃತಿ - ಸ್ವಾಮಿ ವಿವೇಕಾನಂದರ ಚಿತ್ರ

ಧಾರವಾಡ, ಸ್ವಾಮಿ ವಿವೇಕಾನಂದರ 157ನೇ ಜಯಂತಿ ಪ್ರಯುಕ್ತ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಕಲಾವಿದನೊಬ್ಬ ಸ್ವಾಮಿ ವಿವೇಕಾನಂದರ ಚಿತ್ರವನ್ನು ಮರಳಿನಲ್ಲಿ ಬಿಡಿಸಿದ್ದಾರೆ‌.

Swamy Vivekananda Statue Make By The Sand
ವಿವೇಕಾನಂದ ಜಯಂತಿ: ಮರಳಿನಲ್ಲಿ ಕಲಾಕೃತಿ ರಚನೆ

By

Published : Jan 12, 2020, 5:43 PM IST

ಧಾರವಾಡ: ಸ್ವಾಮಿ ವಿವೇಕಾನಂದರ 157ನೇ ಜಯಂತಿ ಪ್ರಯುಕ್ತ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಕಲಾವಿದನೊಬ್ಬ ಸ್ವಾಮಿ ವಿವೇಕಾನಂದರ ಚಿತ್ರವನ್ನು ಮರಳಿನಲ್ಲಿ ಬಿಡಿಸಿದ್ದಾರೆ‌.

ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಎಂಬ ಕಲಾವಿದ ವಿವೇಕಾನಂದರ ಚಿತ್ರವನ್ನು ಮರಳಿನಲ್ಲಿ ಬಿಡಿಸಿ ನಮನ ಅರ್ಪಿಸಿದ್ದಾನೆ ಜನಜಾಗೃತಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯನ್ನು ಹಮ್ಮಿಕೊಂಡಿದ್ದರು. ಹಾಗಾಗಿ ಕಲಾವಿದ ಮಂಜುನಾಥ ಹಿರೇಮಠ ಮರಳಿನಲ್ಲಿ ವಿವೇಕಾನಂದ ಅವರ ಭಾವಚಿತ್ರ ಬಿಡಿಸಿದ್ದಾನೆ. ಸುಮಾರು ಒಂದು ಗಂಟೆ ಸಮಯದಲ್ಲಿ ಪ್ರತಿಮೆ ಪೂರ್ಣಗೊಳಿಸಿದ್ದಾನೆ.

ವಿವೇಕಾನಂದ ಜಯಂತಿ: ಮರಳಿನಲ್ಲಿ ಕಲಾಕೃತಿ ರಚನೆ

ಇದಾದ ಬಳಿಕ ದೊಡ್ಡನಾಯಕನಕೊಪ್ಪ ನಿವಾಸಿಗಳು ಆಗಮಿಸಿ ರಂಗೋಲಿ ಬಿಡಿಸಿ ಹೂವಿನ ಹಾರ ಹಾಕಿ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದ್ದಾರೆ.

ABOUT THE AUTHOR

...view details