ಧಾರವಾಡ: ನೆರೆ ಸಂತ್ರಸ್ತರಿಗೆ ನೆಮ್ಮದಿಯ ಬದುಕು ಸಿಗಲೆಂದು ಪ್ರಾರ್ಥಿಸಿ ಧಾರವಾಡದ ಮೈಲಾರಲಿಂಗ ಸ್ವಾಮೀಜಿ ಪ್ರಾರ್ಥಿಸಿ, ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
ನೆರೆ ಸಂತ್ರಸ್ಥರ ಒಳಿತಿಗಾಗಿ ಧಾರವಾಡದ ಮೈಲಾರಲಿಂಗ ಸ್ವಾಮೀಜಿ ದೀರ್ಘದಂಡ ನಮಸ್ಕಾರ - ಜಲಾಭಿಷೇಕ ಉತ್ಸವ
ಧಾರವಾಡ ಜಿಲ್ಲೆಯಾದ್ಯಂತ ಭಾರೀ ಅನಾಹುತ ಸೃಷ್ಟಿಸಿದ್ದ ಮಳೆಯಿಂದಾಗಿ ಜನಜೀವನದ ಅಸ್ತವ್ಯಸ್ತಗೊಂಡಿತ್ತು. ಜನರ ಜೀವನ ಸುಗಮವಾಗುವಂತೆ ಕೋರಿ ನಾನಾ ರೀತಿಯ ಪೂಜೆ ಪುನಸ್ಕಾರಗಳು ನಡೆದಿದ್ದವು. ನೆರೆ ಸಂತ್ರಸ್ತರಿಗೆ ನೆಮ್ಮದಿಯ ಬದುಕು ಸಿಗಲೆಂದು ಪ್ರಾರ್ಥಿಸಿ ಧಾರವಾಡದ ಮೈಲಾರಲಿಂಗ ಸ್ವಾಮೀಜಿ ಪ್ರಾರ್ಥಿಸಿ, ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
ನೆರೆ ಸಂತ್ರಸ್ಥರ ನೆಮ್ಮದಿ ಬದುಕಿಗಾಗಿ ಸ್ವಾಮೀಜಿಯಿಂದ ಧೀರ್ಘ ದಂಡ ನಮಸ್ಕಾರ
ಜಿಲ್ಲೆಯ ರಾಜೀವ ಗಾಂಧಿ ನಗರದಿಂದ ಸೋಮೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಮತ್ತು ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಇದೇ ವೇಳೆ ಸ್ವಾಮೀಜಿಯಿಂದ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವಿಷ್ಯದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಂತೆ ದೇವರನ್ನು ಪ್ರಾರ್ಥಿಸಲಾಯ್ತು.
ಬಳಿಕ ನಗರದ ರಾಜೀವ ಗಾಂಧಿ ನಗರದಲ್ಲಿರುವ ಹೊಳೆಮ್ಮದೇವಿ ದೇವಸ್ಥಾನದ ಆದಿಶಕ್ತಿ ಹೊಳೆಮ್ಮದೇವಿಗೆ 101 ಕಲಶಗಳಿಂದ ಜಲಾಭಿಷೇಕ ನೆರವೇರಿತು.