ಹುಬ್ಬಳ್ಳಿ: ನಗರದಲ್ಲಿ ಕಸ ವಿಲೇವಾರಿ ಮಾಡುವುದೇ ಒಂದು ದೊಡ್ಡ ತಲೆನೋವು ಆಗಿ ಪರಿಣಮಿಸಿದೆ. ಇಲ್ಲಿ ವ್ಯಕ್ತಿವೋರ್ವ ಆ ಸಮಸ್ಯೆ ಪರಿಹರಿಸಲು ಹಸಿ ತ್ಯಾಜ್ಯ ವಿಲೇವಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಭೂಗತ ಕಸದ ಡಬ್ಬಿ ಹಾಗೂ ಅತ್ಯಾಧುನಿಕ ವಿಲೇವಾರಿ ವಾಹನ ಸಿದ್ಧಗೊಳಿಸಿದ್ದಾರೆ.
ಹೌದು, ಅಧ್ಯಾಪಕ ನಗರದ ನಿವಾಸಿ ವಿಶ್ವನಾಥ್ ಪಾಟೀಲ್ ಎಂಬ ವ್ಯಕ್ತಿ ಹಾಗೂ ಸಂಗಡಿಗರು ಸೇರಿಕೊಂಡು ಕಸ ವಿಲೇವಾರಿಗೆ ಹೊಸ ತಂತ್ರಜ್ಞಾನ ಬಳಸಿಕೊಂಡು ಹೊಸ ಕಸ ವಿಲೇವಾರಿಗೆ ಆಧುನಿಕ ಟಚ್ ನೀಡಿದ್ದಾರೆ. ಭೂಮಿಯೊಳಗೆ ಕಸದ ಡಬ್ಬಿ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರು, ತ್ಯಾಜ್ಯ ನಿರ್ವಹಣೆಗೆ ಬೇಕಾದ ಅಗತ್ಯ ವಾಹನವೊಂದನ್ನು ಸಜ್ಜುಗೊಳಿಸಿದ್ದಾರೆ. ಸಮಾನ ಮನಸ್ಕರೊಂದಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್ ರಚಿಸಿಕೊಂಡ ಆತ ಸತತ ನಾಲ್ಕು ವರ್ಷಗಳ ಪ್ರಯೋಗದ ಪರಿಣಾಮ ಸುಸಜ್ಜಿತ ವ್ಯವಸ್ಥೆಯೊಂದು ಸಿದ್ಧಗೊಳಿಸಿದ್ದಾರೆ. ಈ ಕಸದ ಡಬ್ಬಿ ಹಾಗೂ ವಾಹನ ಇರುವುದರಿಂದ ಕಸ ಸಾಗಿಸುವ ವಾಹನಕ್ಕಾಗಿ ಜನರು ಕಾಯಬೇಕಾಗಿಲ್ಲ ಅಥವಾ ಕಸ ತರುವವರೆಗೂ ಸಿಬ್ಬಂದಿ ನಿಲ್ಲಬೇಕಾಗಿಲ್ಲ. 10 ರಿಂದ15 ಅದರ ಜೊತೆಗೆ ಮನೆಗಳಿಗೆ ಚಿಕ್ಕದಾದ ಈ ಡಸ್ಟ್ ಬಿನ್ ಅಳವಡಿಸಿ ಅವರಿಗೆ ಜವಾಬ್ದಾರಿ ನೀಡಿದರೆ ಸಾಕು, ಹೇಗೆಂದರೆ ಹಾಗೇ ಕಸ ಚೆಲ್ಲುವ ಪ್ರಮೇಯ ಉಂಟಾಗುವುದಿಲ್ಲಾ, ಪಾಲಿಕೆ ವಾಹನ ಬರುವವರೆಗೆ ಕಾಯುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ವಾಹನ ತಯಾರಕ ವಿಶ್ವನಾಥ್.