ಕರ್ನಾಟಕ

karnataka

ETV Bharat / state

ಲೋಕೂರು, ಶಿಬಾರಗಟ್ಟಿಯಲ್ಲಿ ನಡೆಯಿತು ಸ್ವಚ್ಛ ಭಾರತ್ ಜಾಗೃತಿ - swaccha Bharat Mission Awareness Program dharwad news

ಧಾರವಾಡ ಜಿಲ್ಲಾ ಪಂಚಾಯತ್​ ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.

swaccha bharat mission awareness program
ಜಾಗೃತಿ ಕಾರ್ಯಕ್ರಮ

By

Published : Nov 28, 2019, 2:53 PM IST

ಧಾರವಾಡ:ತಾಲೂಕಿನ ಲೋಕೂರ ಹಾಗೂ ಶಿಬಾರಗಟ್ಟಿ ಗ್ರಾಮಗಳಲ್ಲಿ ಸಾರ್ವಜನಿಕ ಶೌಚಾಲಯ ಬಳಕೆ, ವೈಯಕ್ತಿಕ ಶುಚಿತ್ವ, ಪ್ಲಾಸ್ಟಿಕ್ ತ್ಯಾಜ್ಯವಿಲ್ಲದ ಹಸಿ ಕಸ, ಒಣ ಕಸ ವಿಂಗಡಣೆ ಮೊದಲಾದ ಚಟುವಟಿಕೆಗಳ ಬಗ್ಗೆ ಜಿಲ್ಲಾ ಪಂಚಾಯತ್​ ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.

2012ರ ಬೇಸ್ ಲೈನ್ ಸಮೀಕ್ಷೆ ಪ್ರಕಾರ ಈ ಎರಡೂ ಗ್ರಾಮಗಳಲ್ಲಿ 644 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಸಮೀಕ್ಷೆಯಿಂದ ಹೊರಗುಳಿದಿದ್ದ 138 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಕಾಮಗಾರಿ ಆದೇಶ ನೀಡಲಾಗಿದೆ. ಇವುಗಳಲ್ಲಿ 117 ಶೌಚಾಲಯಗಳು ನಿರ್ಮಾಣವಾಗಿದ್ದು, ಸಹಾಯಧನ ಪಾವತಿಸಲಾಗಿದೆ. ಶೌಚಾಲಯ ಹೊಂದದೇ ಇರುವ 48 ಕುಟುಂಬಗಳು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿವೆ.

ಇನ್ನು ಈ ಕುಟುಂಬಗಳ ಪಟ್ಟಿಯನ್ನು ಖಜಾನೆ 2ರಲ್ಲಿ ಸೇರಿಸಲು ತಾಲೂಕು ಪಂಚಾಯಿತಿಗೆ ಕಳಿಸಲಾಗಿದೆ. ಶೌಚಾಲಯ ಹೊಂದದೇ ಇರುವ ಕುಟುಂಬಗಳು ಗ್ರಾಮದಲ್ಲಿರುವ ಸಾಮೂಹಿಕ ಶೌಚಾಲಯ ಸ್ವಚ್ಛಗೊಳಿಸಿ ಬಳಸಲು ಅರಿವು ಮೂಡಿಸಲಾಯಿತು.

ಜಿಲ್ಲಾ ಪಂಚಾಯತ್​ ಸ್ವಚ್ಛ ಭಾರತ ಮಿಷನ್ ಯೋಜನೆಯ ಸಂಯೋಜಕಿ ಪದ್ಮಾವತಿ ನಾಗನಗೌಡರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.

ABOUT THE AUTHOR

...view details