ಕರ್ನಾಟಕ

karnataka

ETV Bharat / state

ನೋ ಕೊರೋನಾ : ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಡಿಸ್ಚಾರ್ಜ್​ - ಕೊರೊನಾ ವೈರಸ್ ಶಂಕೆ

ಕೆಲ ದಿನಗಳ ಹಿಂದೆ ಬೀಜಿಂಗ್​ನಿಂದ ವಾಪಾಸಾಗಿರುವ ದಾಂಡೇಲಿ ಮೂಲದ ವ್ಯಕ್ತಿಯೊಬ್ಬರು ಜ್ವರದಿಂದ ಬಳಲುತ್ತಿದ್ದು, ನಿನ್ನೆ ಕಿಮ್ಸ್​ಗೆ ದಾಖಲಾಗಿದ್ದರು. ಕೊರೋನಾ ವೈರಸ್ ಶಂಕೆ ಇದಿದ್ದರಿಂದ ವಿಶೇಷ ವಾರ್ಡ್​ನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಡಿಸ್ಚಾರ್ಜ್​ , Suspect of Corona virus : Hospitalized patient discharge
ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಡಿಸ್ಚಾರ್ಜ್​

By

Published : Feb 7, 2020, 11:49 AM IST

ಹುಬ್ಬಳ್ಳಿ: ಕೊರೋನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್​ಗೆ ದಾಖಲಾಗಿದ್ದ ರೋಗಿಯನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಬೀಜಿಂಗ್​ನಿಂದ ವಾಪಾಸಾಗಿರುವ ದಾಂಡೇಲಿ ಮೂಲದ ವ್ಯಕ್ತಿಯೊಬ್ಬರು ಜ್ವರದಿಂದ ಬಳಲುತ್ತಿದ್ದು, ನಿನ್ನೆ ಕಿಮ್ಸ್​ಗೆ ದಾಖಲಾಗಿದ್ದರು. ಕೊರೋನಾ ವೈರಸ್ ಶಂಕೆ ಇದ್ದಿದ್ದರಿಂದ ವಿಶೇಷ ವಾರ್ಡ್​ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಇವರಲ್ಲಿ ಶಂಕಿತ ಕೊರೋನಾ‌ ವೈರಸ್ ಇಲ್ಲದಿರುವುದು ತಿಳಿದು ಬಂದಿದೆ.

ಈ ಹಿನ್ನೆಲೆ ರೋಗಿಯನ್ನು ನಿನ್ನೆ ಸಾಯಂಕಾಲ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಕಿಮ್ಸ್ ‌ನಿರ್ದೇಶಕ ಡಾ.‌ರಾಮಲಿಂಗಪ್ಪ ಅಂಟರತಾನಿ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details