ಧಾರವಾಡ: ರಾಜ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ವಿದೇಶಿ ಭಾಷೆ ಕಲಿಕೆಗೆ ಹೆಚ್ಚಿನವರು ಆಸಕ್ತಿ ತೋರುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷಾ ಅಧ್ಯಯನ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಭಾಗದ ಮುಖ್ಯಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ವಿದೇಶಿ ಭಾಷಾ ಅಧ್ಯಯನ ಕೇಂದ್ರವನ್ನು ಕವಿವಿಯಲ್ಲಿ 1960ರಲ್ಲಿ ಕೆ.ಜೆ. ಮಹಾಲೆ ಎಂಬುವವರು ಆರಂಭಿಸಿದರು. ಇತರ ವಿವಿಗಿಂತ ಮೊದಲು ಕರ್ನಾಟಕ ವಿಶ್ವವಿದ್ಯಾಲಯದಲ್ಲೇ ವಿದೇಶಿ ಭಾಷಾ ಅಧ್ಯಯನ ಕೇಂದ್ರ ಆರಂಭಿಸಲಾಯಿತು.
ವಿದೇಶಿ ಭಾಷಾ ಅಧ್ಯಯನ ವಿಭಾಗದಲ್ಲಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ, ಅಡ್ವಾನ್ಸ್ ಡಿಪ್ಲೋಮಾ, ಪಿ.ಹೆಚ್.ಡಿ. ಕೋರ್ಸ್ ಸೇರಿದಂತೆ ವಿವಿಧ ಕೋರ್ಸ್ಗಳಿವೆ. ಈ ಭಾಷಾ ಅಧ್ಯಯನದಿಂದ ಉದ್ಯೋಗಾವಕಾಶಗಳು ಹೆಚ್ಚಿವೆ ಎಂದು ವಿದೇಶಿ ಭಾಷಾ ಅಧ್ಯಯನ ವಿಭಾಗದ ಸಂಯೋಜಕಿ ಪ್ರೇಮಾ ಹಳ್ಳಿಕೇರಿ ಮಾಹಿತಿ ನೀಡಿದ್ದಾರೆ.