ಕರ್ನಾಟಕ

karnataka

ETV Bharat / state

ಪಾಕ್‌ ಪರ ಘೋಷಣೆ.. ಆರೋಪಿಗಳ ಮೇಲೆ ಕೋರ್ಟ್‌ನಲ್ಲಿ ಹಲ್ಲೆಗೈದವರ ವಿರುದ್ಧ ಸುಮೊಟೊ! - ಕೋರ್ಟ್​ ಆವರಣದಲ್ಲಿ ಆರೋಪಿಗಳ ‌ಮೇಲೆ ಚಪ್ಪಲಿ ಎಸೆತ

ಹೀಗಾಗಿ ವಿದ್ಯಾನಗರ ಠಾಣೆಯಲ್ಲಿ ಸುಮಾರು 10-15 ಅಪರಿಚಿತರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

suomoto-case-against-group-of-people-who-attack-on-j-k-students
ಕೆಎಲ್ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ

By

Published : Feb 19, 2020, 1:19 PM IST

ಹುಬ್ಬಳ್ಳಿ :ಕೆಎಲ್ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​ಗೆ ಹಾಜರುಪಡಿಸುವಾಗ ಮೂವರು ಆರೋಪಿ ವಿದ್ಯಾರ್ಥಿಗಳ ಮೇಲೆ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ಮಾಡಿದ್ದವರ‌ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಾಗಿದೆ.

ಕೋರ್ಟ್​ ಆವರಣದಲ್ಲಿ ಆರೋಪಿಗಳ ‌ಮೇಲೆ ಚಪ್ಪಲಿ ಎಸೆತ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.‌ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಹಲ್ಲೆ‌ ನಡೆದಿತ್ತು. ಪೊಲೀಸ್ ವಾಹನ ತಡೆದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.

ಪಾಕ್‌ ಪರ ಘೋಷಣೆ ಕೂಗಿದ್ದ ಆರೋಪಿಗಳ ಮೇಲೆ ಹಲ್ಲೆಗೈದವರ ಮೇಲೆ ಸುಮೊಟೊ..

ಹೀಗಾಗಿ ವಿದ್ಯಾನಗರ ಠಾಣೆಯಲ್ಲಿ ಸುಮಾರು 10-15 ಅಪರಿಚಿತರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details