ಧಾರವಾಡ: ಅಕ್ಟೋಬರ್ 28, 29 ಹಾಗೂ 30 ರಂದು ಧಾರವಾಡದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಆರ್.ಎಸ್.ಎಸ್ ನ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್ ನಡೆಯಲಿದೆ ಎಂದು ಸಂಘದ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ತಿಳಿಸಿದರು.
ಗರಗ್ ರಸ್ತೆಯಲ್ಲಿರುವ ಶಾಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ನಡೆಸಿ ಅವರು ಮಾತನಾಡಿದರು. ಪ್ರತಿ ವರ್ಷ ಕಾರ್ಯಕಾರಿ ಬೈಠಕ್ ಮಾಡುತ್ತೇವೆ. 350 ಪ್ರಾಂತ ಪ್ರಮುಖರು ಬರಲಿದ್ದಾರೆ. ಸಂಘದ ಮುಂದಿನ ಯೋಜನೆಗಳ ಬಗ್ಗೆ ಬೈಠಕ್ ನಡೆಯಲಿದೆ. ಕಾರ್ಯಕರ್ತರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಆರ್ಎಸ್ಎಸ್ನ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ. ದೇವಾಲಯ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಕೂಡಾ ಚರ್ಚೆ ನಡೆಯಲಿದೆ. ಕೊರೊನಾ ಬಗ್ಗೆ ಎಲ್ಲ ಜಾಗೃತಿ ಇಟ್ಟುಕೊಂಡು ಕಾರ್ಯಕ್ರಮ ನಡೆಯಲಿದೆ. ಜುಲೈನಲ್ಲೇ ಈ ಕಾರ್ಯಕ್ರಮದ ಯೋಜನೆ ಹಾಕಲಾಗಿತ್ತು ಎಂದು ಸ್ಪಷ್ಟಪಡಿಸಿದರು.
1925 ರಲ್ಲಿ ಸಂಘ ಸ್ಥಾಪನೆಯಾಗಿದೆ. ಅದಕ್ಕಾಗಿ 100 ವರ್ಷದ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಕೂಡಾ ಚರ್ಚೆ ನಡೆಯಲಿದೆ. ಮೂರು ವರ್ಷದಲ್ಲಿ ಏನು ಮಾಡಬಹುದು ಅನ್ನೋದರ ಚರ್ಚೆ ಮಾಡುತ್ತೇವೆ. ಎಲ್ಲಿ ನಾವು ತಲುಪಿಲ್ಲವೋ ಅಲ್ಲಿ ತಲುಪುವ ಬಗ್ಗೆ ಚರ್ಚೆಯಾಗಲಿದೆ. 28 ರಂದು 9ಕ್ಕೆ ಸಂಘದ ಕಾರ್ಯಕಾರಿ ಆರಂಭವಾಗಲಿದೆ ಎಂದರು.
ಯಾವುದೇ ಮಂತ್ರಿಗಳು ಸಭೆಯಲ್ಲಿ ಭಾಗವಹಿಸುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ RSS ಮೇಲೆ ಟೀಕೆ ವಿಚಾರಕ್ಕೆ ಮಾತನಾಡಿ, ಸಂಘ ಸಮಾಜಮುಖಿಯಾಗಿ ತನ್ನ ಕೆಲಸ ಮಾಡುತ್ತಿದೆ ಎಂದು ಉತ್ತರಿಸಿದರು.
ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಪಾಕಿಸ್ತಾನದ ಪತ್ರಕರ್ತೆ ಜೊತೆ ಇರುವ ಫೋಟೋ ವೈರಲ್ ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ 30 ರಂದು ಮಾತನಾಡುತ್ತೇನೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗ ಮಹಮ್ಮದ್ ಶಮಿ ಟೀಕೆ ವಿಚಾರ ಕ್ರೀಡೆಯನ್ನ ಕ್ರೀಡಾ ಮನೋಭಾವನೆಯಿಂದ ನೋಡಬೇಕು ಎಂದು ಉತ್ತರಿಸಿದರು.
ಓದಿ:ನೌಕರರಿಗೆ ಕೋವಿಡ್ ಲಸಿಕೆ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್