ಕರ್ನಾಟಕ

karnataka

ETV Bharat / state

ಈಗ 'ಪಾಪು'ಗುಣಮುಖ.. 'ಪ್ರಪಂಚ' ಸೃಷ್ಟಿಕರ್ತನಿಗೆ ಕಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ! - ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಾಡೋಜ ಪಾಟೀಲ ಪುಟ್ಟಪ್ಪರಿಗೆ ಯಶಸ್ವಿ ಚಿಕಿತ್ಸೆ

ಇದೊಂದು ಸಹಜ ಶಸ್ತ್ರಚಿಕಿತ್ಸೆ. ಯಾವುದೇ ರೀತಿಯ ಆತಂಕಪಡುವಂತಿಲ್ಲ ಎಂದು ಕಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ಅರುಣ್​ಕುಮಾರ್​​ ಹೇಳಿದ್ದಾರೆ. ಕಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ.‌ಕಬಾಡಿ, ಅರವಳಿಕೆಯ ಸಿಬ್ಬಂದಿ ಶಸ್ತ್ರಚಿಕಿತ್ಸೆಯ ತಂಡದಲ್ಲಿದ್ದರು.

successful-treatment-for-senior-journalist-patila-puttappa-in-hubballi
ಹಿರಿಯ ಪತ್ರಕರ್ತ, ಪಾಟೀಲ ಪುಟ್ಟಪ್ಪ

By

Published : Feb 26, 2020, 2:51 PM IST

ಹುಬ್ಬಳ್ಳಿ: ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಅವರಿಗೆ ಇಂದು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೆದುಳಿನ ಹೊರಭಾಗದಲ್ಲಿ ಹೆಪ್ಪುಗಟ್ಟಿದ್ದ ಸಣ್ಣ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಈ ಹಿಂದೆ ಅವರು ಹೋರಾಟದ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಅದು ಮೆದುಳಿನ ಹೊರಭಾಗದಲ್ಲಿ ಚಿಕ್ಕ ಚಿಕ್ಕ ರಕ್ತಕಣಗಳಿಂದ ರಕ್ತ ಹೆಪ್ಪುಗಟ್ಟಿತ್ತು. ಈಗ ವಯೋಸಹಜದಿಂದಾಗಿ ಮೆದುಳಿನ ಹೊರಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸ್ವಲ್ಪ ಮಟ್ಟಿಗೆ ಮೆದುಳಿಗೆ ಆಯಾಸವಾಗುತ್ತಿತ್ತು.

ಹಿರಿಯ ಪತ್ರಕರ್ತ, ಪಾಟೀಲ ಪುಟ್ಟಪ್ಪನವರಿಗೆ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು.

ಅಲ್ಲದೇ ಸಹಜವಾಗಿಯೇ ನೆನಪಿನ ಶಕ್ತಿ ಕುಂದುತ್ತಾ ಹೋಗುತಿತ್ತು. ಆದರೆ, ಇಂದು ಆ ಸೂಕ್ಷ್ಮ ಭಾಗದಲ್ಲಿ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಆಸ್ಪತ್ರೆಯ ಅಧೀಕ್ಷಿಕ ಡಾ. ಅರುಣಕುಮಾರ್, ನರರೋಗ ತಜ್ಞ ಡಾ. ಸುರೇಶ ದುಗ್ಗಾಣಿ ಹಾಗೂ ಡಾ.ಸೋಪಿಯಾ ಶೇಖ್ ನೇತೃತ್ವದ ವೈದ್ಯರ ತಂಡ ಸುಮಾರು ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆಯ ಮೂಲಕ ಹೆಪ್ಪುಗಟ್ಟಿದ ಭಾಗ ತೆಗೆದಿದ್ದಾರೆ.

ಇದೊಂದು ಸಹಜ ಶಸ್ತ್ರಚಿಕಿತ್ಸೆ. ಯಾವುದೇ ರೀತಿಯ ಆತಂಕಪಡುವಂತಿಲ್ಲ ಎಂದು ಕಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ಅರುಣ್​ಕುಮಾರ್​​ ಹೇಳಿದ್ದಾರೆ. ಕಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ.‌ಕಬಾಡಿ, ಅರವಳಿಕೆಯ ಸಿಬ್ಬಂದಿ ಶಸ್ತ್ರಚಿಕಿತ್ಸೆಯ ತಂಡದಲ್ಲಿದ್ದರು.

For All Latest Updates

ABOUT THE AUTHOR

...view details