ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ಬದಿಗಿಟ್ಟು ಉತ್ಸಾಹದಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳು - Students wrote PUC english exam in hubli

ಧಾರವಾಡ ಜಿಲ್ಲೆಯಲ್ಲಿ 38 ಪರೀಕ್ಷಾ ಕೇಂದ್ರದಲ್ಲಿ 21,294 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಶಾಂತ ಸ್ಥಿತಿಯಲ್ಲಿ ಪರೀಕ್ಷೆ ನಡೆಯಿತು.

PUC english exam
ಕೊರೊನಾ ಭೀತಿ ಬದಿಗಿಟ್ಟು ಉತ್ಸಾಹದಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳು

By

Published : Jun 18, 2020, 4:21 PM IST

ಹುಬ್ಬಳ್ಳಿ:ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್​​​​ಡೌನ್ ಘೋಷಣೆಯಾಗಿದ್ದರಿಂದ, ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಮಾತ್ರ ಉಳಿದುಕೊಂಡಿತ್ತು. ಈಗ ಲಾಕ್​​​​ಡೌನ್ ಸಡಿಲಿಕೆ ಮಾಡಿ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಅನುಮತಿ ನೀಡಿರುವ ಬೆನ್ನಲ್ಲೇ, ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆಯನ್ನು ಬರೆದು ಹೊರಬಂದರು.

ಧಾರವಾಡ ಜಿಲ್ಲೆಯಲ್ಲಿ 38 ಪರೀಕ್ಷಾ ಕೇಂದ್ರದಲ್ಲಿ 21,294 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಶಾಂತ ಸ್ಥಿತಿಯಲ್ಲಿ ಪರೀಕ್ಷೆ ನಡೆಯಿತು. ವಿದ್ಯಾರ್ಥಿಗಳು ಕೊರೊನಾ ವೈರಸ್ ಭೀತಿಯಿಂದ ಕೊಂಚ ಗೊಂದಲಕ್ಕೆ ಸಿಲುಕಿರುವುದನ್ನು ಬಿಟ್ಟರೆ ಯಾವುದೇ ಆತಂಕವಿಲ್ಲದೇ ಪರೀಕ್ಷೆಯನ್ನು ಸಂತೋಷದಿಂದ ಬರೆದರು.

ಕೊರೊನಾ ಭೀತಿ ಬದಿಗಿಟ್ಟು ಉತ್ಸಾಹದಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಇನ್ನು ಹುಬ್ಬಳ್ಳಿ-ಧಾರವಾಡ ನಗರದ 29 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10.30ರಿಂದ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು, ಕೊರೊನಾ ನಡುವೆಯೂ ಪರೀಕ್ಷೆ ಮುಗಿಸಿ ಮಂದಹಾಸ ಮೂಡಿಸಿದ್ದಾರೆ. ನಗರದ ಜೆ.ಜಿ ಕಾಮರ್ಸ್ ಕಾಲೇಜಿನಿಂದ ಪರೀಕ್ಷೆ ಮುಗಿಸಿ ಹೊರಬಂದ ನೂರಾರು ವಿದ್ಯಾರ್ಥಿಗಳು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಪರೀಕ್ಷೆ ಬರೆದಿದ್ದಾರೆ.

ABOUT THE AUTHOR

...view details