ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ಯಾರೂ ಕೂಡ ವಕಾಲತ್ತು ವಹಿಸಬಾರದು ಎಂದು ರಾಜ್ಯ ಯುವ ವಕೀಲರ ಸಂಘ ಆಗ್ರಹಿಸಿದೆ.
ದೇಶ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿಕೊಳ್ಳದಂತೆ ವಕೀಲರ ಸಂಘ ಆಗ್ರಹ - advocate news
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ಯಾರು ಕೂಡ ವಕಾಲತ್ತು ವಹಿಸಬಾರದು ಎಂದು ಯುವ ವಕೀಲರ ಸಂಘ ಆಗ್ರಹಿಸಿದೆ.
ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು
ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ವಕಾಲತ್ತಿಗೆ ವಿರೋಧ ವ್ಯಕ್ತಪಡಿಸಿ ವಾಟ್ಸಪ್ ಗ್ರೂಪ್ನಲ್ಲಿ ಸಂದೇಶ ರವಾನಿಸಿರುವ ಯುವ ವಕೀಲರ ಸಂಘವು, ದೇಶ ದ್ರೋಹಿಗಳ ಪರವಾಗಿ ವಕಾಲತ್ತು ವಹಿಸಿದರೆ ಅಂತಹ ನ್ಯಾಯವಾದಿಗಳ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದೆ.
ವಕೀಲರ ವಾಟ್ಸಪ್ ಗ್ರೂಪ್ವೊಂದರಲ್ಲಿ ಹೀಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿರುವುದಾಗಿ ರಾಜ್ಯ ಯುವ ವಕೀಲರ ಸಂಘದ ಗೌರವಾಧ್ಯಕ್ಷ ಅಶೋಕ್ ಅಣವೇಕರ್ ಮಾಹಿತಿ ನೀಡಿದ್ದಾರೆ.
Last Updated : Feb 16, 2020, 12:08 PM IST