ಕರ್ನಾಟಕ

karnataka

ETV Bharat / state

ಪೇಜಾವರ ಶ್ರೀಗಳನ್ನ ನೆನೆದು ಭಾವುಕರಾದ ವಾದಿರಾಜ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳು

ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ವಿಧಿವಶ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ಶ್ರೀಗಳು ಸ್ಥಾಪಿಸಿ ಬೆಳೆಸಿದಂತಹ ವಾದಿರಾಜ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳು ಹಾಗೂ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ರು.

students-of-the-vadiraja-seva-foundation-who-expressed-condolences-death-of-pejavarashree
ಪೇಜಾವರ ಶ್ರೀಗಳನ್ನ ನೆನೆದು ಭಾವುಕರಾದ ವಾದಿರಾಜ ಸೇವಾ ಪ್ರತಿಷ್ಠಾನದ ವಿಧ್ಯಾರ್ಥಿಗಳು

By

Published : Dec 29, 2019, 5:54 PM IST

ಹುಬ್ಬಳ್ಳಿ:ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ವಿಧಿವಶ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ಶ್ರೀಗಳು ಸ್ಥಾಪಿಸಿ ಬೆಳೆಸಿದ ವಾದಿರಾಜ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳು ಸಂತಾಪ ವ್ಯಕ್ತಪಡಿಸಿದರು.‌

ಪೇಜಾವರ ಶ್ರೀಗಳನ್ನ ನೆನೆದು ಭಾವುಕರಾದ ವಾದಿರಾಜ ಸೇವಾ ಪ್ರತಿಷ್ಠಾನದ ವಿಧ್ಯಾರ್ಥಿಗಳು

ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿ, ಶ್ರೀಗಳು ಹುಬ್ಬಳ್ಳಿಗೆ ಆಗಮಿಸಿದ ವೇಳೆ ತಮ್ಮ ಸಂಸ್ಥೆಗೆ ಭೇಟಿ ನೀಡಿ, ಮಾರ್ಗದರ್ಶನ‌ ಮಾಡುತ್ತಿದ್ದ ಸಂದರ್ಭ ನೆನೆದು ಇಲ್ಲಿನ ವಿದ್ಯಾರ್ಥಿಗಳು ಭಾವುಕರಾದ್ರು.

ಇನ್ನು, ಉಡುಪಿ ಮಠದ ಪೇಜಾವರ ಶ್ರೀ ಅಗಲಿಕೆ ಬಹಳ ನೋವುಂಟು ಮಾಡಿದೆ. ಅವರು ವಿಶ್ವ ಚೈತನ್ಯ ತುಂಬಿಕೊಂಡಿರುವ ಶತಮಾನದ ಅಪರೂಪದ ಸಂತರು ಎಂದು ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಪೇಜಾವರ ಶ್ರೀಗಳ ಅಗಲಿಕೆ ಬಹಳ ನೋವು ಉಂಟು ಮಾಡಿದೆ. ಅವರು ವಿಶ್ವ ಚೈತನ್ಯ ತುಂಬಿಕೊಂಡಿರುವ ವಿಶ್ವ ಸಂತ. ಸಮಾಜ ಮುಖಿಯಾಗಿ ಕೆಲಸ ಮಾಡುವಂತಹ ವ್ಯಕ್ತಿತ್ವ ಅವರದು. ಅವರಲ್ಲಿರುವಂತಹ ಹೃದಯ ಶ್ರೀಮಂತಿಕೆ ಮತ್ಯಾವ ಸಂತರಲ್ಲೂ ನೋಡಲು ಸಾಧ್ಯವಿಲ್ಲ ಎಂದು ಅವರು ಭಾವುಕರಾಗಿ ನುಡಿದರು.

ABOUT THE AUTHOR

...view details