ಧಾರವಾಡ :ಇಲ್ಲಿನ ಗೌರಿ ಶಂಕರ ವಿದ್ಯಾರ್ಥಿನಿಲಯದಲ್ಲಿ ನಿನ್ನೆ 10 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಇದೀಗ ಉಳಿದ ವಿದ್ಯಾರ್ಥಿಗಳು ಕೊರೊನಾ ಭೀತಿಯಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಬ್ಯಾಗು ಹಿಡಿ, ಸೀದಾ ನಡಿ.. ವಸತಿ ನಿಲಯದಲ್ಲಿ ಕೊರೊನಾ ಭೀತಿ.. ಊರುಗಳತ್ತ ವಿದ್ಯಾರ್ಥಿಗಳು - ಕೊರೊನಾ ಸುದ್ದಿ
ಟೆಸ್ಟ್ ಮಾಡಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ವಿವಿಧ ಜಿಲ್ಲೆಗಳಿಂದ ವಿದ್ಯಾಕಾಶಿ ಧಾರವಾಡಕ್ಕೆ ಆಗಮಿಸಿದ್ದ ಕೆಲ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದೆ..
![ಬ್ಯಾಗು ಹಿಡಿ, ಸೀದಾ ನಡಿ.. ವಸತಿ ನಿಲಯದಲ್ಲಿ ಕೊರೊನಾ ಭೀತಿ.. ಊರುಗಳತ್ತ ವಿದ್ಯಾರ್ಥಿಗಳು Students from Dharwad return back to their homes in wake of Covid](https://etvbharatimages.akamaized.net/etvbharat/prod-images/768-512-11438850-792-11438850-1618666274714.jpg)
ಊರುಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳು
ತಮ್ಮ ಊರುಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳು
ಧಾರವಾಡದ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ವಸತಿ ನಿಲಯದಲ್ಲಿ ಕಳೆದ ಎರಡು ದಿನಗಳಿಂದ 150 ಜನ ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗಿತ್ತು. ಇಂದು ಸಹ ಆರೋಗ್ಯ ಇಲಾಖೆ ಕೊರೊನಾ ಟೆಸ್ಟ್ ಕೈಗೊಂಡಿದೆ.
ಟೆಸ್ಟ್ ಮಾಡಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ವಿವಿಧ ಜಿಲ್ಲೆಗಳಿಂದ ವಿದ್ಯಾಕಾಶಿ ಧಾರವಾಡಕ್ಕೆ ಆಗಮಿಸಿದ್ದ ಕೆಲ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದೆ.