ಕರ್ನಾಟಕ

karnataka

ETV Bharat / state

ಯುಜಿಸಿ‌ ನೆಟ್ ಪರೀಕ್ಷೆಯಲ್ಲಿ ಎಡವಟ್ಟು: ವಿದ್ಯಾರ್ಥಿಗಳಲ್ಲಿ ಗೊಂದಲ - ಧಾರವಾಡ ಯುಜಿಸಿ‌ ನೆಟ್ ಪರೀಕ್ಷೆ

UGC net exams-2021: ಯುಜಿಸಿ ನೆಟ್​ ಪರೀಕ್ಷೆಯಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಹಿಂದಿ ಪ್ರಶ್ನೆಪತ್ರಿಕೆ ಬಂದಿತ್ತು. ತಾಂತ್ರಿಕ ದೋಷದಿಂದ ಸಮಸ್ಯೆ ಉಂಟಾಗಿತ್ತು ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

Dharwad UGC net exams
ಯುಜಿಸಿ‌ ನೆಟ್ ಪರೀಕ್ಷೆಯಲ್ಲಿ ಎಡವಟ್ಟು

By

Published : Dec 26, 2021, 5:26 PM IST

ಧಾರವಾಡ: ಯುಜಿಸಿ‌ ನೆಟ್ ಪರೀಕ್ಷೆಯಲ್ಲಿ ಎಡವಟ್ಟು ನಡೆದಿದೆ. ಕನ್ನಡ ಭಾಷೆ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಹಿಂದಿ ಪ್ರಶ್ನೆಪತ್ರಿಕೆ ಬಂದಿತ್ತು. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಯುಜಿಸಿ ಪರೀಕ್ಷೆಯಲ್ಲಿ ಸುಮಾರು 80ಕ್ಕೂ ಅಧಿಕ ಮಂದಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿದ್ದರು. ಆದರೆ ಪ್ರಶ್ನೆಪತ್ರಿಕೆ ಹಿಂದಿ ಭಾಷೆಯಲ್ಲಿ ಬಂದಿತ್ತು. ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಆಗ ತಾಂತ್ರಿಕ ದೋಷದಿಂದ ಪ್ರಶ್ನೆಪತ್ರಿಕೆ ಅದಲು ಬದಲಾಗಿದೆ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ: ಜನವರಿ 3 ರಿಂದ ಮಕ್ಕಳಿಗೆ ಕೋವಿಡ್​ ಲಸಿಕೆ

ABOUT THE AUTHOR

...view details