ಕರ್ನಾಟಕ

karnataka

ETV Bharat / state

ಹು-ಧಾ ಅವಳಿ ನಗರದಲ್ಲಿ ವರುಣಾರ್ಭಟದ ನಡುವೆ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು

ಹೈದರಾಬಾದ್​ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮುಂದುವರಿದಿದೆ. ಹುಬ್ಬಳ್ಳಿ -ಧಾರವಾಡ ಅವಳಿ ನಗರದಲ್ಲಿ ಸುರಿಯುವ ಮಳೆಯ ನಡುವೆ ವಿದ್ಯಾರ್ಥಿಗಳು SSLC ಪರೀಕ್ಷೆಗೆ ಹಾಜರಾದರು.

ಅವಳಿ ನಗರದಲ್ಲಿ ವರುಣಾರ್ಭಟ
ಅವಳಿ ನಗರದಲ್ಲಿ ವರುಣಾರ್ಭಟ

By

Published : Jul 22, 2021, 1:34 PM IST

ಹುಬ್ಬಳ್ಳಿ:ಅವಳಿನಗರದಲ್ಲಿಂದು ಮಳೆಯಾರ್ಭಟ ಜೋರಾಗಿದ್ದು, ಎಸ್​ಎಸ್ಎಲ್​ಸಿ ವಿದ್ಯಾರ್ಥಿಗಳು ಮಳೆಯ ನಡುವೆಯೂ ಪರೀಕ್ಷೆಗೆ ಹಾಜರಾಗಿದ್ದಾರೆ. ಹುಬ್ಬಳ್ಳಿ ನಗರ ಮತ್ತು ತಾಲೂಕಿನಾದ್ಯಂತ 39 ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಪರೀಕ್ಷೆಗೆ ಹುಮ್ಮಸ್ಸಿನಿಂದಲೇ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಇತ್ತ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮಳೆರಾಯನ ಅರ್ಭಟ ಮುಂದುವರಿದಿದೆ. ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಸೋಮವಾರ ಹಾಗೂ ಮಂಗಳವಾರದಂದು ನಗರದಲ್ಲಿ ‌ಕೊಂಚ ಬಿಡುವು ನೀಡಿದ್ದ ಮಳೆ ಇಂದು ನಿರಂತರವಾಗಿ ಸುರಿಯುತ್ತಿದೆ.

ಮಳೆಯ ನಡುವೆ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು

ಮನೆಯೊಳಗೆ ನುಗ್ಗಿದ ಮಳೆ ನೀರು

ನಗರಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ ನಗರದ ಮಂಟೂರ ರಸ್ತೆ, ಹಳೇಹುಬ್ಬಳ್ಳಿ, ಸೆಟ್ಲಮೆಂಟ್‌, ಚನ್ನಪೇಟ, ಆನಂದ ನಗರ, ಗಣೇಶ ನಗರ, ಬೆಂಗೇರಿ, ಸಿದ್ದೇಶ್ವರ ಪಾರ್ಕ್, ತೋಳನಕೆರೆ, ನವ ಅಯೋಧ್ಯಾ ನಗರ 3ನೇ ಕ್ರಾಸ್‌, ಮಂಜುನಾಥ ನಗರ ಸೇರಿ ಹಲವು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜನತಾ ಬಜಾರ್ ಹಾಗೂ ದುರ್ಗದ ಬೈಲ್ ಪ್ರದೇಶದಲ್ಲಿ ಮಳೆ ನೀರು ನುಗ್ಗಿ ವ್ಯಾಪಾರಸ್ಥರು ಪರದಾಡುವಂತಾಗಿದೆ.

ಮಳೆ ಮುಂದುವರಿಯುವ ಸೂಚನೆ

ಈ ನಡುವೆ ಉತ್ತರ ಒಳನಾಡಿನಲ್ಲಿ ಹಲವಾರು ದಿನಗಳಿಂದ ಮಳೆ ಆಗುತ್ತಿದೆ. ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನೂ ಕೆಲ ದಿನ ಮಳೆ ಮುಂದುವರಿಯಲಿದೆ ಎಂದು ಉತ್ತರ ಕರ್ನಾಟಕ ಹವಾಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಆರ್.ಹೆಚ್. ಪಾಟೀಲ್ ಸೂಚನೆ ನೀಡಿದ್ದಾರೆ.

ABOUT THE AUTHOR

...view details