ಧಾರವಾಡ:ಕೊರೊನಾ ಭಯದಿಂದ ಮೊದಲ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಆತ್ಮವಿಶ್ವಾಸ ತುಂಬಿ ಇಂದು ನಡೆದ ಗಣಿತ ಪರೀಕ್ಷೆಗೆ ಕರೆದುಕೊಂಡು ಬಂದ ಘಟನೆ ಜಿಲ್ಲೆಯ ಅಳ್ನಾವರದಲ್ಲಿ ನಡೆದಿದೆ.
ಕೊರೊನಾ ಭಯದಿಂದ ಪರೀಕ್ಷೆಗೆ ಗೈರು: ವಿದ್ಯಾರ್ಥಿನಿ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ಅಧಿಕಾರಿಗಳು - sslc student absent exam due to corona panic
ಕೊರೊನಾ ಹರಡುವ ಭಯದಲ್ಲಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗದೆ ಮನೆಯಲ್ಲೇ ಉಳಿದಿದ್ದ ಧಾರವಾಡ ಮೂಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮನೆಗೆ ಅಧಿಕಾರಿಗಳೇ ತೆರಳಿ ಆಕೆಯ ಮನವೊಲಿಸಿ, ಆತ್ಮಸ್ಥೈರ್ಯ ತುಂಬಿ ಇಂದು ಗಣಿತ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ್ದಾರೆ.
ಭಯಗೊಂಡಿದ್ದ ವಿದ್ಯಾರ್ಥಿನಿ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ಅಧಿಕಾರಿಗಳು
ಇಂದು ಅಳ್ನಾವರದ ಪರೀಕ್ಷಾ ಕೇಂದ್ರದಲ್ಲಿ ಲಕ್ಷ್ಮಿ ಕುಳೆಯಿಂದ ಗಣಿತ ಪರೀಕ್ಷೆ ಬರೆಯಿಸಲಾಯಿತು. ಅಲ್ಲದೇ ಇನ್ನುಳಿದ ಎಲ್ಲಾ ಪರೀಕ್ಷೆಯನ್ನು ಸಹ ಭಯವಿಲ್ಲದೆ ಬರೆಯುವುದಾಗಿ ಲಕ್ಷ್ಮಿ ಭರವಸೆ ನೀಡಿದ್ದಾಳೆ ಎಂದು ಡಿಡಿಪಿಐ ಮೋಹನ ಹಂಚಾಟೆ ತಿಳಿಸಿದ್ದಾರೆ.