ಕರ್ನಾಟಕ

karnataka

ETV Bharat / state

ಹೊಸ ಮೀಸಲಾತಿ ಅನ್ವಯ ಪ್ರವೇಶ ನೀಡದ ಕವಿವಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ..

ಹೊಸ ಮೀಸಲಾತಿ ಅನ್ವಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದ ಹಿನ್ನೆಲೆ ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

KN_DW
ಕರ್ನಾಟಕ ವಿಶ್ವವಿದ್ಯಾಲಯ

By

Published : Nov 18, 2022, 7:50 PM IST

ಧಾರವಾಡ:ಸರ್ಕಾರ ಇತ್ತೀಚೆಗೆ ಎಸ್​ಸಿ ಎಸ್​ಟಿಗೆ ನೀಡಿರುವ ಮೀಸಲಾತಿ ಅನ್ವಯ ಕವಿವಿಯಲ್ಲಿ ಪರಿಶಿಷ್ಟ ಜಾತಿ ಮತ್ತ ಪಂಗಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಮೀಸಲಾತಿ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೇ ಕವಿವಿಗೆ ಆದೇಶ ಪತ್ರ ಸಿಕ್ಕಿಲ್ಲದಿರುವುದರಿಂದ ಪ್ರವೇಶಾತಿ ಕೌನ್ಸೆಲಿಂಗ್ ಮುಗಿಸಿದೆ ಎಂಬ ಕೂಗು ಕೇಳಿಬಂದಿದೆ.

ಕವಿವಿ ಕುಲಪತಿ ಪ್ರತಿಕ್ರಿಯೆ

2022-23 ನೇ ಸಾಲಿನ ವಿದ್ಯಾಭ್ಯಾಸಕ್ಕೆ ಎಸ್ಸಿಗಳಿಗೆ 17 ಮತ್ತು ಎಸ್ಟಿಗಳಿಗೆ 7 ಪ್ರತಿಶತ ಮೀಸಲಾತಿ ನೀಡಬೇಕು ಎಂಬ ಸರ್ಕಾರದ ಆದೇಶ ಆಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಲ್ಲಿ ಆದೇಶವನ್ನು ಧಿಕ್ಕರಿಸಿ ಈಗಾಗಲೇ ಸ್ನಾತಕೋತ್ತರ ಪದವಿಯ ಪ್ರವೇಶಕ್ಕಾಗಿ ಒಂದು ಸುತ್ತಿನ ಕೌನ್ಸೆಲಿಂಗ್ ಸಹ ಮುಕ್ತಾಯ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮೀಸಲಾತಿ ಹೆಚ್ಚಳವನ್ನ ನವೆಂಬರ್ ಒಂದಕ್ಕೆ ಆದೇಶ ಮಾಡಿರುವ ಸರ್ಕಾರದ ನಿಯಮಗಳನ್ನ ಉಳಿದೆಲ್ಲ ವಿವಿಗಳು ಪಾಲಿಸುತ್ತಿವೆ. ಆದರೇ ಕವಿವಿ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, 49 ವಿವಿಧ ವಿಭಾಗದ ವಿದ್ಯಾರ್ಥಿಗಳು ಪ್ರವೇಶಕ್ಕೆ ಮೋಸ ಆಗಿದ್ದು 300 ಕ್ಕೂ ಅಧಿಕ ವಿದ್ಯಾರ್ಥಿಗಳು ಮೀಸಲಾತಿಯಿಂದ ದೂರ ಉಳಿಯುವ ಹಾಗಾಗಿದೆ ಅಂತ ವಿವಿ ಆಡಳಿತದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

ಈ ಕುರಿತು ಕವಿವಿಯ ಕುಲಪತಿ ಮಾತನಾಡಿ, ಈ ಬಗ್ಗೆ ನಮ್ಮ ವಿವಿಗೆ ಆದೇಶ ಪತ್ರ ಸಿಕ್ಕಿರಲಿಲ್ಲ. ಇದೀಗ ನಿನ್ನೆ ರಾತ್ರಿ ನಮಗೆ ಮೀಸಲಾತಿ ಆದೇಶ ಪತ್ರ ದೊರೆತಿದ್ದು, ಇಂದಿನಿಂದಲೇ ಅದನ್ನು ಜಾರಿಗೆ ತರಲಾಗಿದೆ. ಕೇವಲ ಒಂದು ಸುತ್ತಿನ ಕೌನ್ಸೆ​ಲಿಂಗ್​ ಮಾತ್ರ ಮಾಡಲಾಗಿದ್ದು ಇನ್ನೂ ಎರಡು ಸುತ್ತಿನ ಕೌನ್ಸೆ​ಲಿಂಗ್​ ಬಾಕಿ ಇದೆ. ಇದರಲ್ಲಿ ಯಾರಿಗೆ ಅನ್ಯಾಯವಾಗಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ: ಸಿದ್ದರಾಮಯ್ಯ

ABOUT THE AUTHOR

...view details