ಕರ್ನಾಟಕ

karnataka

ETV Bharat / state

ಅವಳಿ ನಗರದಲ್ಲಿ ಬಿರುಸಿನ ಮತದಾನ... ಈ ಬಾರಿ ಶೇ. 5ರಷ್ಟು ಹೆಚ್ಚಳ - ಧಾರವಾಡ ಲೋಕಸಭಾ ಕ್ಷೇತ್ರ

ಎರಡನೇ ಹಂತದ ಮತದಾನ ಪ್ರಕ್ರಿಯೆ ರಾಜ್ಯದಲ್ಲಿ ಪೂರ್ಣಗೊಂಡಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಈ ಬಾರಿ ಹೆಚ್ಚಿನ ಆಸಕ್ತಿ ತೋರಿದ್ದಾನೆ. ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಎಲ್ಲೆಲ್ಲಿ ಎಷ್ಟು ಶೇಕಡಾ ಮತದಾನವಾಯಿತು ಈ ಬಗ್ಗೆ ಸಂಪೂರ್ಣ ಡೀಟೇಲ್ಸ್​ ಇಲ್ಲಿದೆ.

ಮತಯಂತ್ರ ಪ್ಯಾಕಿಂಗ್ ಕಾರ್ಯ

By

Published : Apr 23, 2019, 9:41 PM IST

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಮತದಾನ‌ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಚುನಾವಣೆಗಿಂತಲೂ‌ ಶೇ. 5ರಷ್ಟು ಮತದಾನ‌ ಹೆಚ್ಚಳವಾಗಿದೆ.

ಮತಯಂತ್ರ ಪ್ಯಾಕಿಂಗ್ ಕಾರ್ಯದಲ್ಲಿ ಚುನಾವಣಾ ಸಿಬ್ಬಂದಿ

ರಾತ್ರಿ 8 ಗಂಟೆಯವರೆಗೆ ದೊರೆತ ಅಧಿಕೃತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಶೇ. 70.2ರಷ್ಟು ಮತದಾನವಾಗಿದೆ.

ಕ್ಷೇತ್ರವಾರು‌ ಮತದಾನ

69 -ನವಲಗುಂದ -71.48%.

70-ಕುಂದಗೋಳ- 73.08%

71, ಧಾರವಾಡ - 71.16%.

72- ಹುಬ್ಬಳ್ಳಿ-ಧಾರವಾಡ ಪೂರ್ವ-71.62%

, 73- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- 64.62%.

74- ಹುಬ್ಬಳ್ಳಿ ಧಾರವಾಡ ಪಶ್ಚಿಮ- 63.86%

, 75 -ಕಲಘಟಗಿ-75.98%

83 - ಶಿಗ್ಗಾಂವ್- 71.68%.

ಇನ್ನು 2014 ರ ಲೋಕಸಭೆ ಚುನಾವಣೆಯಲ್ಲಿ 65.98% ಮತದಾನ ದಾಖಲಾಗಿತ್ತು.

ಸ್ಟ್ರಾಂಗ್ ರೂಂ ‌ಸೇರಿದ ಅಭ್ಯರ್ಥಿಗಳ ಹಣೆಬರಹ...

ಧಾರವಾಡ ಲೋಕಸಭೆಯಲ್ಲಿ 19 ಅಭ್ಯರ್ಥಿಗಳ ಹಣೆಬರಹ ಮತಯಂತ್ರ ಸೇರಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಮತದಾನದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆ, ತಾಂತ್ರಿ‌ಕ‌ ದೋಷಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನವಾಗಿದೆ. ವಿವಿ ಪ್ಯಾಟ್, ಮತಯಂತ್ರ ಪ್ಯಾಕಿಂಗ್ ಕಾರ್ಯದಲ್ಲಿ ಚುನಾವಣಾ ಸಿಬ್ಬಂದಿ ಕಾರ್ಯನಿರತವಾಗಿದ್ದು, ಧಾರವಾಡದ ಕೃಷಿ‌ ವಿವಿಯಲ್ಲಿನ ‌ಸ್ಟ್ರಾಂಗ್ ರೂಂಗೆ ಬಿಗಿ ಭದ್ರತೆಯಲ್ಲಿ ವೋಟಿಂಗ್​ ಮಷಿನ್​ಗಳನ್ನು ಸಾಗಿಸಲಾಗುತ್ತಿದೆ. ಮೇ. 23 ರಂದು ‌ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ.

ABOUT THE AUTHOR

...view details