ಧಾರವಾಡ:ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡಲು ಲಾಕ್ಡೌನ್ ಜಾರಿಗೊಳಿಸಲಾಗಿದೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ಸೇವೆಗಳ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅದನ್ನು ಲೆಕ್ಕಿಸದೆ ಓಡಾಡುವ ಜನರಿಗೆ ಪೊಲೀಸರು ತಿಳಿ ಹೇಳುತ್ತಿದ್ದಾರೆ. ಮಧ್ಯಾಹ್ನ 12 ಗಂಟೆ ದಾಟಿದರೂ ಕೂಡಾ ಮಾರುಕಟ್ಟೆಯಲ್ಲಿ ತೆರೆದಿದ್ದ ಅಂಗಡಿ- ಮುಂಗಟ್ಟುಗಳಿಗೆ ಸಿಪಿಐ ಪ್ರಮೋದ್ ಯಲಿಗಾರ ಖುದ್ದು ತೆರಳಿ ಬಂದ್ ಮಾಡುವಂತೆ ಎಚ್ಚರಿಸಿದ್ದಾರೆ.