ಕರ್ನಾಟಕ

karnataka

ಬಿಡಾಡಿ ದನಗಳ ಕಾರ್ಯಾಚರಣೆ: ಹಣ ವಸೂಲಿ ಮಾಡ್ತಿದಿಯಾ ಹುಬ್ಬಳ್ಳಿ ಪಾಲಿಕೆ?

By

Published : Sep 15, 2019, 2:11 PM IST

ಬಿಡಾಡಿ ದನಗಳ ಕಾರ್ಯಾಚರಣೆ ಹೆಸರಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಸಾರ್ವಜನಿಕರಿಂದ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರ್ತಿದೆ.

ಬಿಡಾಡಿ ದನಗಳ ಕಾರ್ಯಾಚರಣೆ

ಹುಬ್ಬಳ್ಳಿ: ಅವಳಿ ನಗರದಲ್ಲಿ ಬಿಡಾಡಿ ದನಗಳ ಕಾರ್ಯಾಚರಣೆ ಹೆಸರಿನಲ್ಲಿ ಮಹಾನಗರ ಪಾಲಿಕೆ ಹಣ ವಸೂಲಿ ದಂಧೆಗೆ ಇಳಿದಿದೆ ಎಂಬ ಆರೋಪ ಕೇಳಿ‌ ಬಂದಿದೆ.

ಬಿಡಾಡಿ ದನಗಳ ಕಾರ್ಯಾಚರಣೆ

ನಗರದಲ್ಲಿ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ತಲೆನೋವಾಗಿದ್ದ ಬಿಡಾಡಿ ದನಗಳ ಕಾರ್ಯಾಚಣೆಗೆ ಮಹಾನಗರ ಪಾಲಿಕೆ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಪಾಲಿಕೆ ಸಿಬ್ಬಂದಿ ಒತ್ತಾಯ ಪೂರ್ವಕವಾಗಿ ರೈತರ ದನಗಳನ್ನು ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಆದ್ರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೋ ರಕ್ಷಣೆ ಹೆಸರಲ್ಲಿ ಮತ್ತು ದಂಡದ ಹೆಸರಲ್ಲಿ ಹಪ್ತಾ ವಸೂಲಿ ಮಾಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಈ ಘಟನೆ ಗೋವುಗಳನ್ನು ಹೊರಗಡೆ ಬಿಡುತ್ತಿರುವ ಅವಳಿ ನಗರದ ಜನರಲ್ಲಿ ಆತಂಕ ಮೂಡಿಸಿದೆ. ಕಳೆದೊಂದು ವಾರದಿಂದ ಅವಳಿ ನಗರದ ಬಿಡಾಡಿ ದನಗಳನ್ನು ಕೊಟಗುಡಸಿ ಪ್ಲಾಟ್ ಹಾಗೂ ಅದರಗುಂಚಿ ಗೋ ಶಾಲೆಯಲ್ಲಿ ಕಟ್ಟಿ ಹಾಕುತ್ತಿದ್ದಾರೆ. ತಮ್ಮ ಹಸು ಎಂದು ಬಂದ ರೈತರಿಂದ ‌ಪ್ರತಿ ದನಕ್ಕೆ ತಲಾ 3 ರಿಂದ 4 ನಾಲ್ಕು ಸಾವಿರ ರೂ ದಂಡ ವಸೂಲಿ ಮಾಡಲಾಗುತ್ತಿದೆ.‌ ಇಷ್ಟೊಂದು ದಂಡ ಕಟ್ಟಿ ತಮ್ಮ ಹಸುಗಳನ್ನು ಬಿಡಿಸಿಕೊಳ್ಳಲು ಹಸುಗಳ ಮಾಲೀಕರು ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಬಿಡಾಡಿ ದನಗಳ ಕಾರ್ಯಾಚಣೆ ಹಿಂದೆ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ABOUT THE AUTHOR

...view details