ಕರ್ನಾಟಕ

karnataka

ETV Bharat / state

ಇದೆಂಥ ವಿಚಿತ್ರ: ಹುಬ್ಬಳ್ಳಿ ಕಿಮ್ಸ್​ನಲ್ಲಿ‌ ಒಂಟಿಗಾಲಿನ ಅಪರೂಪದ ಶಿಶು ಜನನ! - ಹುಬ್ಬಳ್ಳಿಯಲ್ಲಿ ಒಂಟಿಗಾಲಿನ ಮಗು ಜನನ

ಮಧ್ಯಾಹ್ನ ಹೆರಿಗೆ ನೋವಿನಿಂದ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಒಂಟಿ ಕಾಲಿನ ಅಪರೂಪದ ಮಗುವಿಗೆ ಜನ್ಮ ನೀಡಿದ್ದಾರೆ.

hubli
ಅಪರೂಪ ಶಿಶು ಜನನ

By

Published : Jun 20, 2021, 10:46 PM IST

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಒಂಟಿಗಾಲಿನ ಅಪರೂಪದ ಮಗುವಿನ ಜನನವಾಗಿದೆ. ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಭಾನುವಾರ ಮಧ್ಯಾಹ್ನ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೇ ಗಂಟೆಗಳಲ್ಲಿ ಸಿಜೇರಿಯನ್​ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಈ ವೇಳೆ ಮಗು ವಿಚಿತ್ರ ಅಂಗಾಂಗದ ಮೂಲಕ ಜನಿಸಿದ್ದು, ಇದನ್ನು ಕಂಡ ವೈದ್ಯರು ಆಶ್ಚರ್ಯ ಚಕಿತರಾಗಿದ್ದಾರೆ.

ಅಪರೂಪ ಶಿಶು ಜನನ

ಈ ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇಲ್ಲ. ಈ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details